ಮೈಸೂರು

ಗಮನ ಸೆಳೆದ ವಿದೇಶಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಜೆ

web-1ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ದೇಶಗಳ ಬಾವುಟದ ಚಿತ್ರ ಇರುವ ಫಲಕಗಳನ್ನು ಹಿಡಿದುಕೊಂಡು ಮಾರ್ಜಾಲ ನಡಿಗೆಯಲ್ಲಿ ವೇದಿಕೆಯನ್ನೇರಿದರು. ಈ ಸಂದರ್ಭ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಗುಂಪು ಹಾಗೂ ನಾವೆಲ್ಲರೂ ಒಂದೇ ಎನ್ನುವ ಗುಂಪು ಗಮನ ಸೆಳೆಯಿತು.

ಬಳಿಕ ಕನ್ನಡದ ವಿವಿಧ ಹಾಡುಗಳಿಗೆ ಹೆಜ್ಜೆಗಳು ಜೊತೆಯಾದವು. ಉಗಾಂಡ ದೇಶದ ಕಲಾವಿದರು ಬೆಲ್ಲಿ ನೃತ್ಯವನ್ನು ಪ್ರದರ್ಶಿಸಿದರು. ತಜಕಿಸ್ತಾನದ ಯುವತಿಯೋರ್ವಳು ತಜಕಿಸ್ತಾನ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಳು. ವಿದೇಶೀ ವಿದ್ಯಾರ್ಥಿಗಳು ತಮ್ಮ ಕಲಾ ಪ್ರದರ್ಶನವನ್ನು ನೀಡಿ ಭೇಷ್ ಎನಿಸಿಕೊಂಡರು. ಈ ಸಂದರ್ಭ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪರೊ.ಕೆ.ಎಸ್.ರಂಗಪ್ಪ ಮಾತನಾಡಿ ವಿಶ್ವವಿದ್ಯಾನಿಲಯವು ಶತಮಾನದ ಇತಿಹಾಸವನ್ನು ಹೊಂದಿದೆ. ಸಂಸ್ಕೃತಿಯ ಜೊತೆಗೆ ಇತರ ದೇಶಗಳ ಸಂಸ್ಕೃತಿಯನ್ನು ಪ್ರೀತಿಸಿ, ಗೌರವಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಪಿ ಡಾ.ಹೆಚ್.ಟಿ.ಶೇಖರ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಪ್ರೊ.ಜಿ.ಹೇಮಂತ್ ಕುಮಾರ್, ಅಂತರರಾಷ್ಟ್ರೀಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಮಾನ್ಯುಯಲ್ ನ್ಞೆನೊ, ಸಾಂಸ್ಕೃತಿಕ ಕಾರ್ಯದರ್ಶಿ ಕರೀನಾ ಸುನ್ನಸ್ಸೀ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: