ದೇಶಪ್ರಮುಖ ಸುದ್ದಿ

ಚಿಲ್ಲರೆ ಸಮಸ್ಯೆ ಸರಿದೂಗಿಸಲು ಆರ್‍ಬಿಐಯಿಂದ 20 ಹಾಗೂ 50 ರೂಪಾಯಿ ನೋಟು ಮುದ್ರಣ

ನೋಟು ಅಮಾನ್ಯದಿಂದ ತಲೆದೋರಿರುವ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಹಣದ ಸರಾಗ ಚಲಾವಣೆಗಾಗಿ ಶೀಘ್ರದಲ್ಲಿಯೇ 20 ಹಾಗೂ 50 ರೂಪಾಯಿ ಹೊಸ ನೋಟುಗಳನ್ನು ಮುದ್ರಿಸಲಾಗುವುದು ಎಂದು ಆರ್.ಬಿ.ಐ ತಿಳಿಸಿದೆ.

ಹೊಸ ನೋಟಿನಲ್ಲಿ ಮಹಾತ್ಮಗಾಂಧಿ ಸೀರೀಸ್ 2005, ಎರಡೂ ಸಂಖ್ಯಾ ಪ್ಯಾನಲ್‍ಗಳಲ್ಲಿ ಐ ಎಂಬ ಇನ್ಸೆಂಟ್‍ ಅಕ್ಷರ  ಹಾಗೂ ಸಂಸ್ಥೆ ಗವರ್ನರ್ ಸಹಿಯಿದ್ದು 2016ರ ಇಸವಿಯ ಮುದ್ರಣವಾಗಿರುವುದು. 50 ರೂಪಾಯಿಲ್ಲಿ ಮಾತ್ರ ಇನ್ಸೆಂಟ್ ಅಕ್ಷರವಿರುವುದಿಲ್ಲ.

rbi-to-release-new-rs-50-rs-20-notes-but-old-notes-will-still-be-valid500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧದಿಂದ ಜನಸಾಮಾನ್ಯರು ಹಣಕ್ಕಾಗಿ ಪರದಾಡುವಂತಾಗಿದ್ದು ಚಿಲ್ಲರೆ ಸಮಸ್ಯೆಯಿಂದ ವ್ಯಾಪಾರ ವಹಿವಾಟುಗಳು ಮಂದಗತಿಯಲ್ಲಿ ಸಾಗಿವೆ. ಹಳೆ ನೋಟುಗಳು ಅಮಾನ್ಯಗೊಳ್ಳದೆ ಹೊಸ ನೋಟುಗಳು ಚಲಾವಣೆಗೊಳ್ಳಲಿವೆ.

Leave a Reply

comments

Related Articles

error: