ಮೈಸೂರು

ಬೈಕ್ ಗೆ ಬಸ್ ಡಿಕ್ಕಿ : ಸವಾರ ಸಾವು

ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದ ಎದುರು ಭಾನುವಾರ ಮಧ‍್ಯಾಹ್ನ ನಡೆದಿದೆ.

ಮೃತರನ್ನು ಗೌರಿ ಶಂಕರ ನಗರದ ನಿವಾಸಿ ಕಾರ್ತಿಕ್ ಅವರ ಪುತ್ರ ಸತೀಶ(23) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 2.45 ರ ಸಮಯದಲ್ಲಿ ಸತೀಶ ಬೈಕ್ ನಲ್ಲಿ ನಗರದೆಡೆಗೆ ಬರುತ್ತಿದ್ದಾಗ ಊಟಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಆತನ ತಲೆಯ ಮೇಲೆ ಬಸ್ ನ ಚಕ್ರ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬಸ್ ಚಾಲಕ ವೀರಭದ್ರಯ್ಯನನ್ನು ಬಂಧಿಸಲಾಗಿದ್ದು, ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: