
ನವದೆಹಲಿ (ಮೇ 14): ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹಾಗೂ ನಟಿ ರಮ್ಯಾ ಅವರ ವಿರುದ್ಧ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವೀನಿ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್’ಗೆ ಸಲ್ಲಿಸಿದ್ದ ಅರ್ಜಿಯಯನ್ನು ಶೀಘ್ರ ವಿಚಾರಣೆ ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ರಮ್ಯಾ ಅವರು ಟ್ವೀಟರ್’ನಲ್ಲಿ ಹಾಕಿದ್ದ ಪೋಸ್ಟ್ ವಿರೋಧಿಸಿ ವಕೀಲ ಅಶ್ವೀನಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬುದು ಇವರ ಮನವಿಯಾಗಿತ್ತು. ಆದರೆ ಈ ಮನಿಯನ್ನು ಸುಪ್ರೀಮ್ ಕೋರ್ಟ್ ತಳ್ಳಿಹಾಕಿದೆ. (ಎನ್.ಬಿ)