ಪ್ರಮುಖ ಸುದ್ದಿಮೈಸೂರು

ಸಿಎಂ ಸ್ಥಾನ ಇವರಪ್ಪನ ಮನೆ ಸ್ವತ್ತಲ್ಲ : ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಮೇ.14:- ನಿನ್ನೆಯಷ್ಟೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ ದಲಿತ ಸಿಎಂಗಾಗಿ ನನ್ನ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಂಸದ ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರೋಕ್ಷ ತಿರುಗೇಟು ನೀಡಿದ್ದಾರೆ.

ದಲಿತ ಸಿಎಂ ವಿಚಾರ ಪ್ರಸ್ತಾಪ ಕುರಿತು ಟಾಂಗ್ ಕೊಟ್ಟಿರುವ ಹೆಚ್. ವಿಶ್ವನಾಥ್  ಸಿಎಂ‌ ಸ್ಥಾನ ದಾನ ಮಾಡುವವರಂತೆ ಹೇಳಬಾರದು. ಸಿಎಂ ಸ್ಥಾನ ಇವರಪ್ಪನ ಮನೆ ಸ್ವತ್ತಲ್ಲ ಎಂದು ಕಿಡಿಕಾರಿದರು. ಮೈಸೂರಿನಲ್ಲಿ ಜಯಲಕ್ಷ್ಮೀಪುರಂನಲ್ಲಿರುವ ಮಾಜಿಸಚಿವ ಹಾಗೂ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಹೆಚ್.ವಿಶ್ವನಾಥ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು.  ಆ ಬಳಿಕ ಮಾತನಾಡಿದ ಹೆಚ್. ವಿಶ್ವನಾಥ್ ಅವರು, ಸಿಎಂ‌ ಸ್ಥಾನ‌ ಪಡೆಯುವ ಸಾಂವಿಧಾನಿಕ ಹಕ್ಕು ದಲಿತರಿಗೆ ಇದೆ. ಮಾರಮ್ಮನ‌ ಗುಡಿ ಮುಂದೆ ಚಾಟಿ ಬೀಸಿಕೊಳ್ಳುವವನ ಪರಿಸ್ಥಿತಿಯೇ ಸಿಎಂಗೂ ಆಗಿರೋದು ಎಂದು ಲೇವಡಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: