ದೇಶ

ಜಯಲಲಿತಾ ಅವರಿಗೆ ಹೃದಯಾಘಾತ: ಸುದ್ದಿ ಕೇಳಿ ಅಭಿಮಾನಿ ಸಾವು

ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಹೃದಯಾಘಾತ ಆಗಿರುವ ಸುದ್ದಿಯನ್ನು ಟಿವಿಯಲ್ಲಿ ನೋಡಿದ ಎಐಎಡಿಎಂಕೆ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದಾರೆ. ಕಡಬೂರು ಜಿಲ್ಲೆಯ ಸನ್ಯಾಸಿಪೇಟೈ ನಿವಾಸಿಯಾಗಿರುವ ನೀಲಕಂಠನ್ ಆಘಾತದಿಂದ ಹೃದಯಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಜಯಲಲಿತಾ ಅವರ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸಬೇಡಿ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

ತಮಿಳುನಾಡಿನ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಸರಕಾರಿ ಶಾಲಾ-ಕಾಳೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಸರಕಾರಿ ಕಚೇರಿ, ಬ್ಯಾಂಕುಗಳಿಗೂ ರಜೆ ಘೋಷಿಸಲಾಗಿಲ್ಲ.

Leave a Reply

comments

Related Articles

error: