ಸುದ್ದಿ ಸಂಕ್ಷಿಪ್ತ
ಪ್ರತಿಭಾವಂತ ವಿದ್ಯಾರ್ಥಿಗಳಿ ಸನ್ಮಾನ : ಅರ್ಜಿ ಆಹ್ವಾನ
ಮೈಸೂರು,ಮೇ.14 : ವಿವಿ ಮೊಹಲ್ಲಾದ ಸುಮಿತ್ರಾ ಶಿಕ್ಷಣ ಸಂಸ್ಥೆ ವತಿಯಿಂದ 2017-18ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶಾಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಅರ್ಹ ಆಸಕ್ತ ವಿದ್ಯಾರ್ಥಿಗಳು ಮೇ.17 ರಿಂದ 21ರೊಳಗೆ ಹಳೆಯ ವಿದ್ಯಾರ್ಥಿ ಸಂಘ ಕಟ್ಟಡ,ಮಹಾಜನ ಪ್ರೌಢಶಾಲೆ ಆವರಣ,ಜಯಲಕ್ಷ್ಮೀಪುರಂನ ಮೈಸೂರು ಇಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯೊಳಗೆ ಅರ್ಜಿ ಪಡೆದು ಸಲ್ಲಿಸಬಹುದು. ಮಾಹಿತಿಗಾಗಿ ಮೊ.ನಂ.9448380459, 9880218025 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)