ಮೈಸೂರು

ವಿಜೃಂಭಣೆಯಿಂದ ನಡೆದ ಸಿದ್ದಲಿಂಗಪುರ ಜಾತ್ರೆ : ಧನ್ಯರಾದ ಭಕ್ತರು

vishnuಮೈಸೂರಿನ ಸಿದ್ದಲಿಂಗಪುರದ ಶ್ರೀಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ವಿವಿಧ ಜಿಲ್ಲೆ ಹಾಗೂ ಮೈಸೂರಿನ ವಿವಿಧ ತಾಲೂಕುಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹುತ್ತಕ್ಕೆ ಹಾಲೆರೆದು ಸಂಭ್ರಮಿಸಿದರು. ಸೋಮವಾರ ಬೆಳಗಿನ ಜಾವ 3ರಿಂದ ರಾತ್ರಿ ಹನ್ನೆರಡರವರೆಗೂ ದೇವರಿಗೆ ವಿಶೇಷ ಪೂಜೆ ನಡೆಯಲಿದ್ದು, ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸೋಮವಾರ ಭಾರತೀ ವಿಷ್ಣುವರ್ಧನ್ ಸಿದ್ದಲಿಂಗಪುರಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು ವಿಷ್ಣುವರ್ಧನ್ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸುತ್ತಿರುವುದು ಸಂತಸದ ವಿಷಯ ಎಂದರು.

ಸಿದ್ದಲಿಂಗಪುರದ ಜಾತ್ರೆಯು ವಿಜೃಂಭಣೆಯಿಂದ ನಡೆದಿದ್ದು ಭಕ್ತರು ಸರದಿ ಸಾಲಿನಲ್ಲಿ ನಿಂತು ವೀಕ್ಷಿಸಿದರು. ಇಲ್ಲಿ ನಾಗರಹಾವನ್ನು ತಂದು ಹಾಲೆರೆಯಲಾಗುತ್ತಿತ್ತು. ಆದರೆ ಪೊಲೀಸರು ನಿರ್ಬಂಧ ವಿಧಿಸಿದ್ದರಿಂದ ಈ ಬಾರಿ ಬೆಳ್ಳಿಯ ನಾಗರ ಮೂರ್ತಿಗಳನ್ನಿರಿಸಿ ಹಾಲೆರೆಯಲಾಗುತ್ತಿದೆ.

ಮೈಸೂರು ನಗರದ ವಿವಿಧೆಡೆಯಿರುವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಗಳಲ್ಲಿ ಹಾಗೂ ವಿನೋಬಾ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನಗಳಲ್ಲೂ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದ್ದು, ಸಹಸ್ರಾರು ಭಕ್ತರು ಪೂಜೆಯನ್ನು ನೆರವೇರಿಸಿ ಕೃತಾರ್ಥರಾಗುತ್ತಿದ್ದಾರೆ.

Leave a Reply

comments

Related Articles

error: