ಕರ್ನಾಟಕಮೈಸೂರು

ಜಯಲಲಿತಾಗೆ ಹೃದಯಸ್ಥಂಭನ: ಮಂಡ್ಯದಲ್ಲೂ ವ್ಯಾಪಕ ಭದ್ರತೆ, ಪಟಾಕಿ ನಿಷೇಧ

ಮಂಡ್ಯ: ಹೃದಯಸ್ಥಂಭನಕ್ಕೀಡಾಗಿ ಜಯಲಲಿತಾ ಅವರ ಅನಾರೋಗ್ಯ ಉಲ್ಪಣಿಸಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಮಂಡ್ಯದಲ್ಲಿ ಜಿಲ್ಲಾ ಪೊಲೀಸರು ವ್ಯಾಪಕ ಭದ್ರತಾ ಕ್ರಮ ಕೈಗೊಂಡಿದ್ದಾರೆ.

ಪಟಾಕಿ ಹಚ್ಚಿ ದಾಂಧಲೆ ನಡೆಸಬಹುದೆನ್ನುವ ಕಾರಣಕ್ಕೆ ಅನಿರ್ದಿಷ್ಟಾವಧಿವರೆಗೆ ಪಟಾಕಿಗಳನ್ನೂ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ವಿಭಾಗದಿಂದ ತಮಿಳುನಾಡಿಗೆ ಸಂಚರಿಸುವ ಎಲ್ಲ ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ಈಗಾಗಲೇ ತಡೆಹಿಡಿಯಲಾಗಿದೆ. ವೇಳಾಪಟ್ಟಿಯಂತೆ ನಿಯಮಿತವಾಗಿ ಸಂಚರಿಸುವ ಮಂಡ್ಯ-ಕೊಯಮತ್ತೂರು ಬಸ್ಸುಗಳನ್ನು ಸಹ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಚಾಮರಾಜನಗರ ಗಡಿಯಿಂದ ತಮಿಳುನಾಡಿಗೆ ಹೊರಬೇಕಿದ್ದ 75 ಬಸ್ಸುಗಳು ಮತ್ತು ಕರ್ನಾಟಕದಲ್ಲಿ ತಮಿಳುನಾಡು ಸಾರಿಗೆ ಬಸ್ಸುಗಳು ವಾಪಸಾಗಿವೆ ಎಂದು ಗೊತ್ತಾಗಿದೆ.

Leave a Reply

comments

Related Articles

error: