ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್ ಸೋಲು : ಸಿಎಂ ನಿವಾಸದಲ್ಲಿ ಮುಖಂಡರ ಸಭೆ

ಚಾಮುಂಡೇಶ್ವರಿಯಲ್ಲಿ 35 ಸಾವಿರಕ್ಕೂ ಹೆಚ್ಚು ಮತಗಳ ಹಿನ್ನಡೆಯಲ್ಲಿರುವ ಸಿಎಂ

ಬೆಂಗಳೂರು, ಮೇ 15 : ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಹಿನ್ನಡೆ ಸಾಧಿಸುತ್ತಿದ್ದಂತೆ ಪಕ್ಷದ ಹಿರಿಯ ಮುಖಂಡರು, ಮುಖ್ಯಮಂತ್ರಿ ನಿವಾಸದಲ್ಲಿಂದು ಸಭೆ ನಡೆಸಿದರು. ಕಾಂಗ್ರೆಸ್ ಪಕ್ಷದ ಸೋಲಿನ ಕಾರಣಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಿಎಂ ನಿವಾಸ ಕಾವೇರಿಯಲ್ಲಿ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಗುಲಾಮ್‍ನಬಿ ಆಜಾದ್ ಸೇರಿದಂತೆ ಹಲವು ಗಣ್ಯರು ಚರ್ಚಿಸಿದರು..

ಆಡಳಿತ ವಿರೋಧಿ ಅಲೆ ಇಲ್ಲದಿದ್ದರೂ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣಗಳೇನು, ಟಿಕೆಟ್ ಹಂಚಿಕೆಯ ಗೊಂದಲ, ನಾಯಕರ ಅಸಹಕಾರ, ಒಗ್ಗಟ್ಟಿನ ಕೊರತೆ, ಪ್ರಚಾರದಲ್ಲಿ ಹಿಂದೆ ಬಿದ್ದಿದ್ದು ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ತೀವ್ರ ಕುತೂಹಲ ಕೆರಳಿಸಿದ್ದ ಜಿದ್ದಾ ಜಿದ್ದಿನ ಕ್ಷೇತ್ರವಾಗಿದ್ದ ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು  ತೀವ್ರ ಹಿನ್ನಡೆಯಲ್ಲಿ ಮುಖಭಂಗ ಅನುಭವಿಸುತ್ತಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನ ಜಿ.ಟಿ.ದೇವೇಗೌಡ ಅವರು ನೇರ ಸ್ಪರ್ಧೆ ನೀಡಿದ್ದು, ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯನವರು ತೀವ್ರ ಹಿನ್ನಡೆಯಲ್ಲಿದ್ದು ಸಮೀಪದ ಪ್ರತಿಸ್ಪರ್ಧಿ ಜಿಟಿಡಿ ಅವರು 20ನೇ ಸುತ್ತಿನಲ್ಲಿ 1 ಲಕ್ಷ 308 ಮತಗಳನ್ನು ಪಡೆದಿದ್ದಾರೆ, ಆದರೆ ಸಿಎಂ 63 ಸಾವಿರ 899 ಮತಗಳನ್ನು ಗಳಿಸಿದ್ದಾರೆ.

ಅತಿ ಆತ್ಮವಿಶ್ವಾಸ,ದುರಹಂಕಾರದಿಂದ ಸಿಎಂ ಅವರು ಪಕ್ಷದ ಹಿರಿಯ ನಾಯಕರಾದ ಮಾಜಿ ಸಚಿವರಾದ ಶ್ರೀನಿವಾಸ ಪ್ರಸಾದ್, ಹೆಚ್.ವಿಶ್ವನಾಥ್ ಸೇರಿದಂತೆ ಹಿರಿಯರನ್ನು ನಿರ್ಲಕ್ಷಿಸಿದ್ದು ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಮುಳುವಾಗಿದೆ. ಸೋಲಿನ ಮುನ್ಸೂಚನೆಯಿಂದಲೇ ಬಾದಾಮಿಯಲ್ಲಿ ಸ್ಪರ್ಧಿಸಿದ್ದಾರೆ ಎಂಬ ಆರೋಪವು ಇದೆ.

(ಕೆ.ಎಂ.ಆರ್)

Leave a Reply

comments

Related Articles

error: