Uncategorized

ಅತಂತ್ರ ವಿಧಾನಸಭೆ : ಕಿಂಗ್ ಮೇಕರ್ಸ್ ಅಲ್ಲ ‘ಜೆಡಿಎಸ್’ ಇಸ್ ಕಿಂಗ್?!

ಬೆಂಗಳೂರು, ಮೇ 15 : ಕಿಂಗ್ ಮೇಕರ್ ಅಲ್ಲಾ ನಾವೇ ಕಿಂಗ್ ಗಳು ಎನ್ನುವ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆಗೆ ರಾಜ್ಯದ ಮತದಾರರು ಪುಷ್ಠಿ ನೀಡಿದ್ದಾರೆ.

2018ರ ವಿಧಾನಸಭಾ ಚುನಾವಣೆಯ ಮತ ಏಣಿಕೆಯೂ ಇನ್ನೇನು ಮುಕ್ತಾಯ ಹಂತದಲ್ಲಿದ್ದು ಈಗಾಗಲೇ ಅತಂತ್ರ ವಿಧಾನಸಭಾ ರಚನೆ ಸ್ಪಷ್ಟ ಗೋಚರವಾಗಿದ್ದು, ಈ ನಿಟ್ಟಿನಲ್ಲಿ  39 ಸ್ಥಾನ ಪಡೆದಿರುವ ಜೆಡಿಎಸ್ ರಾಜ್ಯ ರಾಜಕಾರಣದಲ್ಲಿ ಮುಖ್ಯ ಪಾತ್ರವಹಿಸಲು ಸಕಲ ಸನ್ನದ್ದಾಗುತ್ತಿದ್ದೆ.

ಫಲಿತಾಂಶ ಪ್ರಕಟವಾದ ಬೆನ್ನಲ್ಲೇ  ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದು ಸಂಜೆ ತುರ್ತು ಕೋರ್ ಕಮಿಟಿ ಸಭೆಯನ್ನು ಕರೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳನ್ನು ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಜೆಡಿಎಸ್‍ಗೆ ದೊರೆಯದಿರುವ ಹಿನ್ನೆಲೆಯಲ್ಲಿ ಹಾಗೂ ಮುಂದಿನ ರಾಜಕೀಯ ನಿರ್ಧಾರವನ್ನು ಕೈಗೊಳ್ಳುವ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಸಂಬಂಧ ಜೆಡಿಎಸ್ ಪಕ್ಷದ ನಿಲುವನ್ನು ತಳೆಯಬೇಕು ಎಂಬುದು ಸೇರಿದಂತೆ ಕೆಲವು ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. (ಕೆ.ಎಂ.ಆರ್)

Leave a Reply

comments

Related Articles

error: