ಮನರಂಜನೆ

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬೆನ್ನುನೋವಿಗೆ ನಡೆದಿದೆ ಚಿಕಿತ್ಸೆ

ದೇಶ(ಮುಂಬೈ)ಮೇ.15:- ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅನಾರೋಗ್ಯ ಪೀಡಿತರಾಗಿದ್ದಾರಂತೆ.  ಮಿಥುನ್ ಚಕ್ರವರ್ತಿ ಹಲವು ಸಮಯಗಳಿಂದ ಬೆಳ್ಳಿತೆರೆಯಿಂದ ದೂರವುಳಿದಿದ್ದರು.

ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಪರದೆಯಿಂದ ದೂರವುಳಿದಿದ್ದಾರಂತೆ. ಬೆನ್ನು ನೋವು ಶಮನವಾಯಿತೆಂದು ಒಮ್ಮೆ ಬಂದಿದ್ದರಾದರೂ ಮತ್ತೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ವರದಿಗಳ ಪ್ರಕಾರ ಅವರು ಊಟಿಯಲ್ಲಿ ಒಂದು ವರ್ಷದವರೆಗೆ ಇದ್ದರು. ತಮ್ಮ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದರು. ಚಿಕಿತ್ಸೆಗಾಗಿ ಲಾಸ್ ಏಂಜಲೀಸ್ ಗೆ ಕೂಡ ಹೋಗಿದ್ದರು. ಗುಣಮುಖರಾದ ಬಳಿಕ ಮುಂಬೈಗೆ ಮರಳಿದ್ದರು. ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರೀಗ ಪೂರ್ಣ ಪ್ರಮಾಣದಲ್ಲಿ ಗುಣಮುಖ್ರಾಗಲು ಸಮಯ ಬೇಕು ಎಂದು ಎನ್ನಲಾಗುತ್ತಿದೆ. ರಾಜ್ಯಸಭೆಗೂ ರಾಜೀನಾಮೆ ನೀಡಿದ್ದರು. 2009ರಲ್ಲಿ ಚಿತ್ರೀಕರಣದ ವೇಳೆ ಮಿಥುನ್ ಚಕ್ರವರ್ತಿ ಗಂಭೀರವಾಗಿ ಗಾಯಗೊಂಡಿದ್ದರು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಶೀಘ್ರ ಗುಣಮುಖರಾಗಿ ಬರಲಿ ಎನ್ನುವುದೇ ಅಭಿಮಾನಿಗಳ ಹಾರೈಕೆ (ಎಸ್.ಎಚ್)

Leave a Reply

comments

Related Articles

error: