ಮೈಸೂರು

‘ಕನ್ನಡ ನಾಡು- ನುಡಿ- ಜಲ’ ಕುರಿತ ರಾಜ್ಯಮಟ್ಟದ ಕವಿಗೋಷ್ಠಿ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಮರ್ಪಣಾ ಫೌಂಡೇಷನ್ ಹಾಗೂ ಕೆವಿಎಸ್ ಟ್ರಸ್ಟ್ ಆಶ್ರಯದಲ್ಲಿ ರಾಜೇಂದ್ರಭವನದಲ್ಲಿ ಭಾನುವಾರ ‘ಕನ್ನಡ ನಾಡು- ನುಡಿ- ಜಲ’ ಕುರಿತ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಿತು.

ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಕಾವ್ಯ ಸೌಮ್ಯದಿಂದ ಕೂಡಿರಬಾರದು. ಖಡ್ಗದಂತೆ ಕಠಿಣವಾಗಿರಬೇಕು. ಅದು ಮೃದುವಾದರೆ ಜನಪ್ರತಿನಿಧಿಗಳು ಎಚ್ಚರಗೊಳ್ಳುವುದಿಲ್ಲ. ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂಬ ಬಿಎಂಶ್ರೀ ಕವಿತೆ. ‘ಕನ್ನಡಕ್ಕಾಗಿ ಕೈಯೆತ್ತು. ನಿನ್ನ ಕೈ ಕಲ್ಪವೃಕ್ಷವಾಗಲಿ’ ಎಂಬ ಕುವೆಂಪು ಕವಿತೆಗಳಷ್ಟು ಕಠಿಣತೆ ಇಂದಿನ ಕಾವ್ಯಗಳಿಗೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಆರ್‍ಟಿಐ ಅಡಿಯಲ್ಲಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳನ್ನು ಅಸೃಶ್ಯರನ್ನಾಗಿ ನೋಡಲಾಗುತ್ತಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳೆಂಬ ಭೇದವನ್ನು ಕಲ್ಪಿಸಿ ಸರಕಾರ ಆಧುನಿಕ ಅಸೃಶ್ಯತೆಯನ್ನು ಆಚರಿಸುತ್ತಿದೆ ಎಂದರು.

ಅನಂತು, ಜೆಡಿಎಸ್‍ನ ಚಂದ್ರೇಗೌಡ, ಎಸ್‍ಎಲ್‍ವಿಎಸ್ ಆಸ್ಪತ್ರೆ ವೈದ್ಯ ಡಾ.ಇ. ಲೋಕೇಶ್, ಅವಿಸೋ ಇನ್ಫೋಟೆಕ್‍ನ ರೇಣುಕಾಪ್ರಸಾದ್, ವಿಶ್ವಾಸ್ ಭಟ್‍ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಮಲೆಯೂರು ಗುರುಸ್ವಾಮಿ, ಫೌಂಡೇಶನ್ ಅಧ್ಯಕ್ಷ ಯತಿರಾಜ್, ಸದಸ್ಯ ಮಹದೇವಸ್ವಾಮಿ ಇತರರು ಇದ್ದರು.

Leave a Reply

comments

Related Articles

error: