ಲೈಫ್ & ಸ್ಟೈಲ್

ಲಿಂಬು ಉಪಯೋಗಿಸಿ ತ್ವಚೆಯ ಅಂದ ಹೆಚ್ಚಿಸಿಕೊಳ್ಳಿ

ನಿಂಬು ಅಥವಾ ಲಿಂಬು ಹಣ್ಣನ್ನು ಬಾಯಾರಿದಾಗ ತಯಾರಿಸುವ ಶರಬತ್ತಿನ ಸ್ವಾದ ಹೆಚ್ಚಿಸಲು ಉಪಯೋಗಿಸುತ್ತೇವೆ. ಆದರೆ ಲಿಂಬುವಿನಲ್ಲಿರುವ ಆ್ಯಸಿಡ್ಸ್ ಮತ್ತು ಫಾಯ್ಬರ್ಸ್ ಬಿಟ್ಟು ಅದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಗಳು ಮನುಷ್ಯನ ಶರೀರಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ.

ಅದನ್ನು ಹಲವು ರೀತಿಯಲ್ಲಿ ಉಪಯೋಗಿಸಿದಾಗ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ತೂಕ : ಪ್ರತಿದಿನ ಒಂದು ಗ್ಲಾಸ್ ಕುದಿಸಿದ ನೀರಿಗೆ ಅರ್ಧ ಲಿಂಬುವಿನ ರಸ ಸೇರಿಸಿ ಕುಡಿದರೆ ಚಯಾಪಚಯಕ್ರಿಯೆ ಸರಾಗವಾಗಿ ನಡೆದು ತೂಕವನ್ನು ಕಡಿಮೆ ಮಾಡುತ್ತದೆ.

ಮೊಡವೆ : ಪ್ರತಿದಿನ ಒಂದು ಚಮಚ ಲಿಂಬು ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರಾಗಿ, ತ್ವಚೆ ಕಾಂತಿಯುಕ್ತವಾಗಿರುತ್ತದೆ.

ಕೂದಲುದುರುವಿಕೆ : ಒಂದು ಚಮಚ ಲಿಂಬುರಸ ಮತ್ತು ಈರುಳ್ಳಿರಸ ಸೇರಿಸಿ ಕೂದಲಬುಡಕ್ಕೆ ಮಸಾಜ್ ಮಾಡಿ. ವಾರದಲ್ಲಿ ಮೂರು ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಕೂದಲುದುರುವುದು ನಿಲ್ಲಲಿದೆ.

ತಲೆಹೊಟ್ಟು : ಒಂದು ಚಮಚ ಲಿಂಬು ರಸ ಮತ್ತು ಒಂದು ಚಮಚ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಮಸಾಜ್ ಮಾಡುವುದರಿಂದ ತಲೆಹೊಟ್ಟು ನಿಯಂತ್ರಣಕ್ಕೆ ಬರಲಿದೆ.

ನೆರಿಗೆಗಳು : ಒಂದು ಚಮಚ ಲಿಂಬುರಸ ಹಾಗೂ ಒಂದು ಚಮಚ ಬೇವಿನ ಎಲೆ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದಲ್ಲಿ ಮುಖದಲ್ಲಿನ ನೆರಿಗೆಗಳು ಮಾಯವಾಗಲಿದೆ.

ಕೆಮ್ಮು : ಒಂದು ಗ್ಲಾಸ್ ಲಿಂಬು ಬೆರೆಸಿದ ನೀರಿಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಚಳಿಗಾಲದ ಕೆಮ್ಮು ಕಡಿಮೆಯಾಗುತ್ತದೆ.

ಸೌಂದರ್ಯ ಹೆಚ್ಚಳ : ಒಂದು ಚಮಚ ಲಿಂಬು ರಸಕ್ಕೆ ರೋಸ್ ವಾಟರ್ ಅನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಸೌಂದರ್ಯ ಹೆಚ್ಚುತ್ತದೆ.

ಕಲೆ ನಿವಾರಣೆ : ಒಂದು ಚಮಚ ಲಿಂಬು ರಸಕ್ಕೆ ಟೊಮೆಟೋ ಪಲ್ಪ್ ನ್ನು ಮಿಶ್ರಣ ಮಾಡಿ ತ್ವಚೆಗೆ ಹಚ್ಚುವುದರಿಂದ ತ್ವಚೆಯ ಸೌಂದರ್ಯ ಹೆಚ್ಚುವುದಲ್ಲದೇ ಕಲೆಗಳು ದೂರಾಗುತ್ತವೆ.

ಬ್ಲ್ಯಾಕ್ ಹೆಡ್ಸ್ : ಒಂದು ಚಮಚ ಲಿಂಬು ರಸಕ್ಕೆ ರೋಸ್ ವಾಟರ್ ನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಬ್ಲ್ಯಾಕ್ ಹೆಡ್ ಗಳು ನಿವಾರಣೆಯಾಗುತ್ತವೆ.

ಸದಾ ಮನೆಯಲ್ಲಿರುವ ಲಿಂಬುವಿನಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

Leave a Reply

comments

Related Articles

error: