ಕರ್ನಾಟಕಮೈಸೂರು

ಪ್ರತಿಭಾ ಪುರಸ್ಕಾರ ಮತ್ತು ಸಮವಸ್ತ್ರ ವಿತರಣಾ ಸಮಾರಂಭ

ಪ್ರಗತಿ ವಿದ್ಯಾ ಸಂಸ್ಥೆಯಿಂದ 2015-16ನೇ ಸಾಲಿನ ಪ್ರತಿಭಾ ಪುರಸ್ಕಾರ, ಶಾಲಾ ಸಮವಸ್ತ್ರ, ಬ್ಯಾಗ್ ಹಾಗೂ ನೋಟ್ ಪುಸ್ತಕಗಳ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ 12 ರಂದು ಬೆಳಿಗ್ಗೆ 11 ಗಂಟೆಗೆ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಸಮುದಾಯ ಭವನದಲ್ಲಿ ಆಯೋಜಿಸಿದ್ದು ಉದ್ಘಾಟನೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವ ತನ್ವೀರ್ ಸೇಠ್ ನೆರವೇರಿಸುವರು. ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ್ ಕೋಟಿ ಆಗಮಿಸುವರು,

ಪ್ರಗತಿ ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎನ್. ಮಹದೇವು ಶಾಲಾ ಆಡಳಿತ ಮಂಡಳಿ ಸದಸ್ಯರುಗಳಾದ ಡಿ.ಎಸ್. ಶ್ರೀನಿವಾಸ್, ಎಸ್. ಆನಂದ್, ಧನಪಾಲ್ , ಶಾಲಾಭಿವೃದ್ಧಿ ಸಮಿತಿ ಸದಸ್ಯರಾಧ ರಫೀಕ್ ಅಹಮ್ಮದ್, ಪಿ.ಶ್ರೀಕಂಠಮೂರ್ತಿ ಉಪಸ್ಥಿತರಿರುವರು.

Leave a Reply

comments

Related Articles

error: