ಮೈಸೂರು

ಚುನಾವಣಾಧಿಕಾರಿಯ ಏಕಪಕ್ಷೀಯ ನಿರ್ಧಾರಕ್ಕೆ ಖಂಡನೆ : ಏಕಾಂಗಿ ಪ್ರತಿಭಟನೆ

ಮೈಸೂರು,ಮೇ.16:- ಚುನಾವಣಾ ಫಲಿತಾಂಶದ ವೇಳೆ ವಿವಿಪ್ಯಾಟ್ ಹಾಗೂ ಇವಿಎಂ ಎರಡರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿರುವುದನ್ನು ಖಂಡಿಸಿ ಕನ್ನಡ ಪಕ್ಷ- ಕರ್ನಾಟಕದ ಅರವಿಂದ ಶರ್ಮ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಮೈಸೂರು ನ್ಯಾಯಾಲಯದ ಗಾಂಧಿ ಪ್ರತಿಮೆ ಎದುರಿಂದು ಪ್ರತಿಭಟನೆ ನಡೆಸಿ ಮಾತನಾಡಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನಡೆದ ಚುನಾವಣೆ ಮತ ಎಣಿಕೆಯಲ್ಲಿ ಯಾದೃಚ್ಛಿಕರಿಸುವ ಪ್ರಕ್ರಿಯೆಯನ್ನು ಕೊನೆಯ ಹಂತದಲ್ಲಿ ಮಾಡಲಾಯಿತು. ಕೃಷ್ಣರಾಜ ಕ್ಷೇತ್ರದಲ್ಲಿನ ಎಲ್ಲ ಮತಗಟ್ಟೆಗಳಲ್ಲಿನ ಮತಗಟ್ಟೆಯನ್ನು ಆಯ್ಕೆ ಮಾಡಿದಾಗ 104ನೇ ಮತಗಟ್ಟೆಯು ಆಯ್ಕೆಯಾಯಿತು. 104ಮತಗಟ್ಟೆಯ ವಿವಿಪ್ಯಾಟ್ ತೆಗೆದುಕೊಂಡು ಅದರಲ್ಲಿನ ಮತದಾರರು ಆಯ್ಕೆ ಮಾಡಿದ್ದನ್ನು ಎಣಿಸಲಾಯಿತು. 104ನೇ ಮತಗಟ್ಟೆಯ ಇವಿಎಂ ಯಂತ್ರ ತೆಗೆದುಕೊಳ್ಳದೇ,ಅದರ ಎಣಿಕೆ ಮಾಡಿದ ಟೇಬಲ್ ನಲ್ಲಿ ಬರೆದುಕೊಂಡ ಮಾಹಿತಿಯನ್ನು ತೆಗೆದುಕೊಂಡು ಕೃಷ್ಣರಾಜ ಕ್ಷೇತ್ರದ ಚುನಾವಣಾಧಿಕಾರಿ ವಿವಿಪ್ಯಾಟ್ ಮತ್ತು ಇವಿಎಂ ಎರಡರಲ್ಲಿ ಒಟ್ಟು ಸರಾಸರಿ ಹಾಗೂ ಮೂರು ಪಕ್ಷಗಳ ವೋಟಿಂಗ್ ಸರಿ ಹೊಂದಲಿಲ್ಲ. ಚುನಾವಣಾಧಿಕಾರಿ ವಿವಿಪ್ಯಾಟ್ ನಲ್ಲಿ ಬಂದ ಮತ ಎಣಿಕೆಯನ್ನು ಪರಿಶೀಲನೆಗೊಳಿಸದೇ ಇವಿಎಂ ನಲ್ಲಿನ ಟೇಬಲ್ ಮೇಲೆ ಬರೆದುಕೊಂಡ ಓಟಿಂಗ್ ನ್ನೇಆಧರಿಸಿ ಕೈಬರಹದಲ್ಲಿ ತಿದ್ದುಪಡ ಮಾಡಿದ್ದಾರೆ. ಅಭ್ಯರ್ಥಿಯಾಗಿದ್ದ ನಾನು ವಿರೋಧಿಸಿದರೂ ಮರು ಎಣಿಕೆ ಮಾಡಲು ಕೋರಿದಾಗ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಮಾಡಲಾಗುವುದಿಲ್ಲವೆಂದರು. ಅವರ ನಡೆ ಸಂಶಯಕ್ಕೆ ಆಸ್ಪದವಾಗಿದೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: