ದೇಶ

ಟೈಮ್ಸ್ ‘ವರ್ಷದ ವ್ಯಕ್ತಿ’ಯಾಗಿ ಪ್ರಧಾನಿ ಮೋದಿ…?

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ‘ಟೈಮ್ ಪರ್ಸನ್ ಆಫ್‍ ದಿ ಇಯರ್ 2016’ ಆನ್‍ಲೈನ್ ರೀಡರ್ಸ್ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತ ಪಡೆದಿದ್ದಾರೆ. ಅಮೆರಿಕಾ ಚುನಾಯಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಸ್ಥಾನಿಕ ನಾಯಕ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅವರು ಹೆಚ್ಚು ಮತವನ್ನು ಪಡೆದಿದ್ದಾರೆ.

ಆನ್‍ಲೈನ್ ಸಮೀಕ್ಷೆ ಭಾನುವಾರ ರಾತ್ರಿ ಮುಗಿದಿದ್ದು, ಈ ವೇಳೆ ಮೋದಿ ಅವರು ಶೇ.18 ಮತವನ್ನು ಪಡೆದಿದ್ದರು. ಒಬಾಮ, ಟ್ರಂಪ್ ಮತ್ತಿತರರು ಶೇ.7ರಷ್ಟು ‘ಯೆಸ್‍’ ಮತವನ್ನು ಪಡೆದಿದ್ದಾರೆ. ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍ಬರ್ಗ್ (ಶೇ.2) ಮತ್ತು ಅಮೆರಿಕಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಿಲರಿ ಕ್ಲಿಂಟನ್ (ಶೇ.4) ‘ಯೆಸ್’ ಮತ ಪಡೆದಿದ್ದಾರೆ.

ಟೈಮ್ಸ್ ಸಂಪಾದಕರು ಈ ವಾರದ ಕೊನೆಯಲ್ಲಿ ವರ್ಷದ ವ್ಯಕ್ತಿಯ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಆನ್‍ಲೈನ್ ಸಮೀಕ್ಷೆಯ ಪ್ರಕಾರ 2016ರ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ನರೇಂದ್ರ ಮೋದಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದಾರೆ. ವರ್ಷದ ವ್ಯಕ್ತಿ ಆಯ್ಕೆಗೆ ಓದುಗರು ಕೊಟ್ಟಿರುವ ಫಲಿತಾಂಶವೇ ಪ್ರಮುಖ ಮಾನದಂಡವಾಗಿದೆ ಎಂದು ಟೈಮ್ಸ್ ಹೇಳಿದೆ.

ಯಾವ ವ್ಯಕ್ತಿ ಹೆಚ್ಚು ಸುದ್ದಿಯಲ್ಲಿದ್ದು, ವಿಶ್ವವನ್ನು ತನ್ನೆದೆಡೆ ಸೆಳೆದುಕೊಂಡಿದ್ದಾರೆ ಎಂಬ ಮಾನದಂಡದಲ್ಲಿ ಟೈಮ್ಸ್ ಕಳೆದ 4 ವರ್ಷಗಳಿಂದ ಸಮೀಕ್ಷೆ ನಡೆಸುತ್ತಾ ಬಂದಿದೆ. ಕಳೆದ ವರ್ಷ ಜರ್ಮನಿಯ ಚಾನ್ಸಲರ್ ಏಂಜೇಲಾ ಮರ್ಕೆಲ್ ಅವರು ವರ್ಷದ ಪ್ರಭಾವಿ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು.

Leave a Reply

comments

Related Articles

error: