ಮೈಸೂರು

ಡಿ.5-7: ರಾಷ್ಟ್ರೀಯ ಔಷಧ ಸಪ್ತಾಹ

ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಸೋಸಿಯೇಷನ್ ವತಿಯಿಂದ ಜೆಎಸ್ಎಸ್ ಔಷಧ ಮಹಾವಿದ್ಯಾಲಯದಲ್ಲಿ ಡಿ.5 ರಿಂದ 7 ರವರೆಗೆ ‘ರಾಷ್ಟ್ರೀಯ ಔಷಧ ಸಪ್ತಾಹ ಆಚರಣೆ’ಯನ್ನು  ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ‍್ಯಕ್ಷ ಡಾ.ಜಿ.ವಿ.ಪೂಜಾರ್ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಡಿ.5 ರಂದು ಜೆಎಸ್ಎಸ್ ಕಾಲೇಜಿನ ಶ್ರೀರಾಜೇಂದ್ರ ಭವನದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ರಕ್ತದಾನ ಶಿಬಿರ, ರಸಪ್ರಶ್ನೆ, ಚರ್ಚಾಕೂಟ ಇತರ ಅಂತರಕಾಲೇಜು ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಅಧ್ಯಕ್ಷ ಡಾ.ಹೆಚ್.ಬಸವನಗೌಡಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ಡಿ.6 ರಂದು ಬೆಳಿಗ್ಗೆ 10 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಔಷಧ ಉಪಯೋಗಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ  ‘ಫಾರ್ಮಾ ರ್ಯಾಲಿ’ ಯನ್ನು ಹಮ್ಮಿಕೊಳ್ಳಲಾಗಿದ್ದು, ಮೆಡಿಕಲ್ ಕಾಲೇಜಿನ ಮುಖ್ಯಸ್ಥರಾದ ಡಾ.ಬಿ.ಕೃಷ್ಣಮೂರ್ತಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.

ಡಿ.7 ರಂದು ರಾಜೇಂದ್ರ ಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಔಷಧ ರಂಗದ ವಿವಿಧ ಸಾಧಕರಿಗೆ ‘ಔಷಧ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಜೋಶಿ, ಕುಲಕರ್ಣಿ, ಪಾರ್ಥಸಾರಥಿ, ಡಾ. ವಿಶಾಲ್ ಕುಮಾರ್ ಗುಪ್ತ ಹಾಜರಿದ್ದರು.

Leave a Reply

comments

Related Articles

error: