ಮೈಸೂರು

ದೇವರ ಮೊರೆ ಹೋದ ಜಯಲಲಿತಾ ಅಭಿಮಾನಿಗಳು

jaya-web-2ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು ಅವರ ಅಭಿಮಾನಿಗಳು ದೇವರಲ್ಲಿ ಮೊರೆ ಹೋಗಿದ್ದಾರೆ.

ಮೈಸೂರಿನ ಲಕ್ಷ್ಮಿಪುರಂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹುಟ್ಟಿ ಬೆಳೆದ ಪ್ರದೇಶವಾಗಿದ್ದು, ಅವರ ನಿವಾಸದ ಎದುರು ಅಭಿಮಾನಿಗಳು ಜಯಲಲಿತಾಪರ ಘೋಷಣೆಗಳನ್ನು ಕೂಗುತ್ತ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂತು. ಕೈಯ್ಯಲ್ಲಿ ಅವರ ಭಾವಚಿತ್ರವನ್ನು ಹಿಡಿದ ಅಭಿಮಾನಿಗಳು ಶೀಘ್ರ ಗುಣಮುಖರಾಗಿ ಮನೆಗೆ ಬರಲೆಂದು ಪ್ರಾರ್ಥಿಸಿದರು. ಇದೇ ವೇಳೆ ಅಭಿಮಾನಿಗಳು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Leave a Reply

comments

Related Articles

error: