ಮೈಸೂರು

ಇವಿಎಂ ಮತಯಂತ್ರಗಳ ಹ್ಯಾಕಿಂಗ್ ನಡೆದಿದೆ; ಆರೋಪ, ಬಿಗುವಿನ ವಾತಾವರಣ

ಮೈಸೂರು,ಮೇ.17:- ಮೈಸೂರಿನಲ್ಲಿ ಇವಿಎಂ ಯಂತ್ರಗಳ ಹ್ಯಾಕಿಂಗ್ ಭೂತ ಆವರಿಸಿದ್ದು, ನಾಲ್ವರ ತಂಡದಿಂದ ಹ್ಯಾಕಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ.

ಎನ್.ಆರ್.ಠಾಣೆ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಜ್, ಎಸ್.ಡಿ.ಪಿ.ಐ.ಪಕ್ಷದ ಅಭ್ಯರ್ಥಿ ಅಬ್ದುಲ್ ಮಜೀದ್ ಹಾಗೂ ಕೆ.ಆರ್.ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಸೋಮಶೇಖರ್ ಎನ್.ಆರ್.ಠಾಣೆಗೆ ಆಗಮಿಸಿದ್ದಾರೆ. ಮೂರು ಪಕ್ಷಗಳ ನೂರಾರು ಬೆಂಬಲಿಗರು  ಜಮಾವಣೆಗೊಂಡಿದ್ದು, ಆರೋಪಿಗಳು ಅಬ್ದುಲ್ಲಾ ಹಾಗೂ ಸೋಮಶೇಖರ್ ರನ್ನು ಸಂಪರ್ಕಿಸಿ ಹ್ಯಾಕಿಂಗ್ ಮಾಡುವ ಆಮಿಷ ಒಡ್ಡಿದ್ದರು. ಅಬ್ದುಲ್ಲಾಗೆ ಐದು ಕೋಟಿ ಡೀಲ್ ಕೇಳಿದ್ದರು ಎನ್ನಲಾಗಿದೆ.ಅಬ್ದುಲ್ಲಾ ಡೀಲ್ ನಿರಾಕರಿಸಿದ್ದರು.  ಸೋಲಿನ ನಂತರ ಎಚ್ಚರಗೊಂಡ ಸೋತ ಅಭ್ಯರ್ಥಿಗಳು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು  ಮರು ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.  ವೆಂಕಟೇಶ್ ಹಾಗೂ ಪ್ರದೀಪ್ ಸೇರಿದಂತೆ ನಾಲ್ವರ ತಂಡದಿಂದ ಹ್ಯಾಕಿಂಗ್ ನಡೆದಿರುವ ಆರೋಪವನ್ನು ಸೋತ ಅಭ್ಯರ್ಥಿಗಳು ಹೊರಿಸಿದ್ದು,ಬೆಂಬಲಿಗರನ್ನು ಚದುರಿಸಲು ಪೊಲೀಸರು  ಹರಸಾಹಸ ಪಡುತ್ತಿದ್ದಾರೆ. ನಾಲ್ವರು ಆರೋಪಿಗಳ ಹಿಂದೆ ವಿದೇಶಿ ವ್ಯಕ್ತಿಯ ಕೈವಾಡವಿದೆ ಎಂಬ ಶಂಕೆಯನ್ನು ಜೆಡಿಎಸ್ ನ ಅಬ್ದುಲ್ಲಾ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: