ಕರ್ನಾಟಕಪ್ರಮುಖ ಸುದ್ದಿ

ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯಲು ಈ ಉದ್ಯಮಿ ಮಾಡಿರುವ ವೆಚ್ಚವೆಷ್ಟು ಗೊತ್ತಾ?

ನವದೆಹಲಿ (ಮೇ 17): ಪ್ರಪಂಚದಲ್ಲಿ ಹಲವು ರೀತಿಯ ಕ್ರೇಜ಼್ ಇರುವ ಜನ ಇದ್ದಾರೆ. ಅದರಲ್ಲಿ ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಹಾಕಿಸಿಕೊಳ್ಳುವುದೂ ಕೂಡ ಒಂದು ಕ್ರೇಜ಼್. ಆಶ್ಚರ್ಯವಂದರೆ ಇದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುವವರೂ ಇದ್ದಾರೆ. ಇದಕ್ಕಾಗಿ ಸಾರಿಗೆ ಅಧಿಕಾರಿಗಳು ಬಿಡ್ ಕೂಡ ನಡೆಸುತ್ತಾರೆ.

ಜೈಪುರದ ತನೇಜಾ, ಇವೆಂಟ್ ಮ್ಯಾನೇಜ್’ಮೆಂಟ್ ಕಂಪನಿಯೊಂದರ ಮಾಲೀಕ. ಇವರು ತಾವು ಕೊಂಡ ಐಶಾರಾಮಿ ಕಾರುಗಳಿಗೆಲ್ಲಾ ಫ್ಯಾನ್ಸಿ ನಂಬರ್ 1 ಅನ್ನು ಬಿಡ್ ಮೂಲಕ ಪಡೆಯುತ್ತಾರೆ. ಹಾಗೆಯೇ ಮೊನ್ನೆಯಷ್ಟೇ 16 ಲಕ್ಷ ಬಿಡ್ ಮಾಡಿ ಫ್ಯಾನ್ಸಿ ನಂಬರ್ ಪಡೆದಿದ್ದಾರೆ. ಈ ಮೂಲಕ ಅವರ ಕಾರಿನ ನಂಬರ್ ಪ್ಲೇಟ್ ಸಂಖ್ಯೆ RJ 45 CG 0001 ಆಗಿದೆ. ಪ್ರಿಮಿಯಮ್ ನಂಬರ್’ಗೆ ಇಷ್ಟೊಂದು ಹಣ ಬಿಡ್ ಮಾಡಿದ ಮೊದಲನೇ ವ್ಯಕ್ತಿ ಇವರಾಗಿದ್ದಾರೆ.

ತನೇಜಾ ಮಾರ್ಚ್ 25 ರಂದು 1.5 ಕೋಟಿ ಮೊತ್ತದ ಜಾಗ್ವರ್ ಕಾರು ಖರೀದಿಸಿದ್ರು. ಆದ್ರೆ 0001 ಫ್ಯಾನ್ಸಿ ನಂಬರ್ ಪಡೆಯಲು ಸುಮಾರು ಒಂದು ತಿಂಗಳು ಕಾದಿದ್ದಾರೆ. ಇದಕ್ಕೂ ಮೊದಲು ತನೇಜಾ 2011 ರಲ್ಲಿ ಬಿಎಂಡ್ಲೂ 5 ಕಾರು ಖರೀದಿಸಿದ್ರು. ಇದರ ಪ್ರಿಮಿಯಮ್ ನಂಬರ್ RJ 14 CP 0001 ಗಾಗಿ 10 ಲಕ್ಷದ 31 ಸಾವಿರ ರೂಪಾಯಿ ಕೊಟ್ಟಿದ್ರು.

ನಂತರ ಸೆಕೆಂಡ್ ಹ್ಯಾಂಡ್ ಸ್ಕೋಡಾ ಕಾರು ಖರೀದಿಸಿದ್ರು. ಕಾರಣ ಆ ಕಾರಿನ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ RJ 20 CB 0001 ಆಗಿತ್ತು. ನಂತರ ಬಿಎಂಡ್ಲೂ 5 ಸೀರಿಸ್ ಕಾರು ಮಾರಿ, ಬಿಎಂಡ್ಲೂ 7 ಸೀರಿಸ್ ಕೊಂಡು ಅದಕ್ಕೆ ಹಳೆಯ ನಂಬರ್ ಪ್ಲೇಟನ್ನೇ ಉಳಿಸಿಕೊಂಡಿದ್ರು.

ಮೂಲತಃ ಮಧ್ಯಪ್ರದೇಶದವರಾದ ತನೇಜಾ ತಂದೆ 1984 ರಲ್ಲಿ ರಾಜಸ್ಥಾನಕ್ಕೆ ಬಂದು ನೆಲೆಸಿದ್ರು. ತನೇಜಾ ಕೂಡಾ ತನ್ನ ವಿದ್ಯಾಭ್ಯಾಸಕ್ಕಾಗಿ ಸಣ್ಣ ಪುಟ್ಟ ಕೆಲಸ ಮಾಡಿ ಹಣ ಹೊಂದಿಸಿಕೊಳ್ತಿದ್ರು. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗಾಳಿಪಟ, ರಾಖಿ ಹಬ್ಬದ ಟೈಂನಲ್ಲಿ ರಾಖಿ ಮಾರುತ್ತಿದ್ದರು. ಹಾಗೆಯೇ ಆಟೋ ರಿಕ್ಷಾ ಓಡಿಸಿ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಮಾಡಿಕೊಳ್ತಿದ್ರು. ಇದೇ ವೇಳೆ ಅವರಿಗೆ ಮಾಡೆಲಿಂಗ್ ಅವಕಾಶ ಸಿಕ್ಕಿತು. ಇದ್ರಿಂದ ಹಣ ಮತ್ತು ಹೆಸರು ಗಳಿಸಿದ್ರು. ನಂತರ ಅವರೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಸ್ಥಾಪಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: