ಮೈಸೂರು

ಡಿ.10-11: ಅಖಿಲ ಭಾರತ ಸಮಾವೇಶ

ಅಲ್ಜೈಮರ್ ಆ್ಯಂಡ್ ರಿಲೇಟೆಡ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಅಖಿಲ ಭಾರತ ಸಮಾವೇಶವನ್ನು  ಡಿ.10 ಮತ್ತು 11 ರಂದು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ(AIISH) ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಮೈಸೂರು ಘಟಕದ ಅಧ್ಯಕ್ಷ ಡಾ.ಹನುಮಂತಾಚಾರ್ ಜೋಷಿ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.10 ರಂದು ಬೆಳಿಗ್ಗೆ 9.30 ಕ್ಕೆ ಲಂಡನ್ ನ ಕಿಂಗ್ಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಮಾರ್ಟಿನ್ ಪ್ರಿನ್ಸ್ ಅವರು ಈ ಸಮಾವೇಶವನ್ನು  ಉದ್ಘಾಟಿಸಲಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಬಿ. ಕೃಷ್ಣಮೂರ್ತಿ, ಅಖಿಲ ಭಾರತ ಸಂಸ್ಥೆಯ ಮುಖ್ಯಸ್ಥೆ ಮೀರಾಪಟ್ಟಾಭಿ, ಯುನೈಟೆಡ್ ಕಿಂಗ್ ಡಂ ನ ಅಲ್ಜೈಮರ್ ಡಿಸೀಸ್ ಇಂಟರ್ ನ್ಯಾಷನಲ್ ನ ಉಪಾಧ್ಯಕ್ಷ ಡಾ.ಜೆಕೊಬ್ ರಾಯ್, ಆಯುಷ್ ಸಂಸ್ಥೆಯ ನಿರ್ದೇಶಕಿ ಡಾ.ಸಾವಿತ್ರಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದ ಸಮಾರೋಪ ಸಮಾರಂಭ ಡಿ.11 ರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶರತ್ ಕುಮಾರ್, ಜಯರಾಮನ್, ಅರುಣ್ ಕುಮಾರ್ ಮತ್ತು ಮೆಹುಲ್ ಪಟೇಲ್ ಉಪಸ್ಥಿತರಿದ್ದರು.

 

Leave a Reply

comments

Related Articles

error: