ಮೈಸೂರು

ಹದಿನೈದು ದಿನಗಳ ಕಾಲಾವಕಾಶ ‘ಕುದುರೆ ವ್ಯಾಪಾರಕ್ಕೆ’ ನಾಂದಿ : ಪುಟ್ಟಸಿದ್ದಶೆಟ್ಟಿ ಟೀಕೆ

ಮೈಸೂರು,ಮೇ.17 : ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಸಾಬೀತಿಗೆ ನೀಡಿರುವ ಹದಿನೈದು ದಿನಗಳ ಕಾಲಾವಕಾಶದ ಬಗ್ಗೆ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ದೀರ್ಘ ಕಾಲಾವಕಾಶದಿಂದ ಕುದುರೆ ವ್ಯಾಪಾರಕ್ಕೆ ಸ್ವತಃ ರಾಜ್ಯಪಾಲರೇ ವೇದಿಕೆ ಸೃಷ್ಠಿಸಿದ್ದು, ಸಂವಿಧಾನ ರಕ್ಷಕರೇ ಭಕ್ಷರಾಗಿದ್ದಾರೆ, ನೆರೆಯ ಗೋವಾ ರಾಜ್ಯಕ್ಕೆ ಒಂದು ನ್ಯಾಯ, ರಾಜ್ಯಕ್ಕೆ ಇನ್ನೊಂದು ನ್ಯಾಯವೇ? ಮಾನ್ಯತೆ ಇಲ್ಲದಿದ್ದರೂ ಗೋವಾದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯದು ಸರ್ವಾಧಿಕಾರ ಧೋರಣೆಯೆಂದು ಆರೋಪಿಸಿದರು.

ಗೋವಾದಂತೆಯೇ ರಾಜ್ಯದಲ್ಲಿ 118 ಶಾಸಕರ ಬೆಂಬಲವಿರುವ ಜೆಡಿಎಸ್-ಕಾಂಗ್ರೆಸ್ ಗೆ ಸಮ್ಮಿಶ್ರ ಸರ್ಕಾರ ರಚನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಅಭಿನಂದನೆ : ಕನ್ನಡ ಶಾಲೆಯನ್ನು ಮುಚ್ಚದಂತೆ ವೇದಿಕೆಯಿಂದ ಅಭಿಯಾನ ಆರಂಭಿಸಲಿದ್ದು, ಪ್ರಸಕ್ತ ಸಾಲಿನಲಿನ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ 11ನೇ ಸ್ಥಾನ ಗಳಿಸಿದ ಮೈಸೂರು ಜಿಲ್ಲೆ ಬಗ್ಗೆ ಪ್ರಶಂಸಿ, ಸಾಧನೆಗೆ ಶ್ರಮಿಸಿದ ಸಾರ್ವಜನಿಕ ಶಿಕ್ಷಣಾಧಿಕಾರಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು.

ಗೋಷ್ಠಿಯಲ್ಲಿ ಹೆಚ್.ಪಿ.ಸಂಪತ್ತು, ಮಹದೇವ ಗಾಣಿಗ, ಡಾ.ಮಧು,ಬೋರಪ್ಪ ಶೆಟ್ಟಿ, ಪ್ರಸನ್ನ ಕುಮಾರ್, ತಿಮ್ಮಶೆಟ್ಟಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: