ಮೈಸೂರು

ಯುವ ಜನತೆಯಲ್ಲಿ ಗತ ವೈಭವದ ಜಾಗೃತಿ ಮೂಡಿಸುವುದು ಅಗತ್ಯ : ಡಾ.ಪಾವಗಡ ಪ್ರಕಾಶ್ ರಾವ್

ಕನ್ನಡಕ್ಕೆ ತನ್ನದೇ ಆದ ವಿಶೇಷ ಸ್ಥಾನಮಾನವಿದ್ದು, ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವಜನತೆಯಲ್ಲಿ ಗತವೈಭವದ ಜಾಗೃತಿ ಮೂಡಿಸುವುದು ಅಗತ್ಯ ಎಂದು ಡಾ.ಪಾವಗಡ ಪ್ರಕಾಶ್ ರಾವ್ ತಿಳಿಸಿದರು.

ಸಂಸ್ಕೃತಿ ಪ್ರತಿಷ್ಠಾನ, ಅನಂತ ರಿಸರ್ಚ್ ಫೌಂಡೇಷನ್ ಹಾಗೂ ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಮತ್ತು ಪ್ರತಿಭಾ ಸಂಸತ್ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಂನ ರಾಮ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಸಂಸ್ಕೃತೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ 2016 ಕಾರ್ಯಕ್ರಮವನ್ನು ಡಾ.ಪಾವಗಡ ಪ್ರಕಾಶ್ ರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕನ್ನಡ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳ ಭಾಷೆಯಲ್ಲಿ ಒಂದು. ಕನ್ನಡ ಸ್ವಾಭಿಮಾನದ ತಳಹದಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ತಿಳಿಸಿದರು.

ಸಂಸ್ಕೃತ ಅತ್ಯಂತ ಪುರಾತನ ಭಾಷೆ. ಇದನ್ನು ಮುಂದಿನ ಪೀಳಿಗೆಗೆ ನಾವು ಕೊಡುಗೆಯಾಗಿ ನೀಡಬೇಕು. ಪ್ರಪಂಚದಲ್ಲಿ ತತ್ವಶಾಸ್ತ್ರ ಮತ್ತು ತತ್ವಜ್ಞಾನವನ್ನು ಭಗವದ್ಗೀತೆ ಹೊಂದಿದೆ. ಅದು ಕೇವಲ ಕೃತಿಯಲ್ಲ. ಸಮಾಜವನ್ನು ಪರಿಷ್ಕರಿಸಲು ಬಳಸುವ ಸಾಧನ. ವೇದ, ಶಾಸ್ತ್ರಗಳ ಅನೇಕ ಸಂಶೋಧನೆಗಳು, ಮಹತ್ವದ ದಾಖಲೆಗಳು ಸಂಶೋಧಕರಿಗೆ ಲಭ್ಯವಾಗಿದೆ. ಕರ್ನಾಟಕ ಬೇರೆ ರಾಜ್ಯಗಳಿಂದ ಆಗಮಿಸಿದ ಸಾಹಿತಿಗಳಿಗೂ ಆಶ್ರಯತಾಣವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಹಬ್ಬ- ಹರಿದಿನಗಳು ಎಂಬ ಪುಸ್ತಕವನ್ನು ಸಂಸ್ಕೃತ ವಿವಿ ಕುಲಪತಿ ಡಾ.ಪದ್ಮಶೇಖರ್ ಲೋಕಾರ್ಪಣೆಗೊಳಿಸಿದರು.

ವೇದಿಕೆಯಲ್ಲಿ  ಪ್ರೊ.ಎಂ.ಎ.ಲಕ್ಷ್ಮೀತಾತಾಚಾರ್, ಇಳೈಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ಕೆ.ರಘುರಾಂ, ಮೈಸೂರು ವಿಶ್ವ ವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಮಾಜಿ ನಿರ್ದೇಶಕ ಡಾ.ಎಂ.ಶಿವಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: