ಮನರಂಜನೆ

ನಟಿ ಸೌಂದರ್ಯ ಜೀವನ ಕಥೆಯಾಗಲಿದೆಯಾ ಸಿನಿಮಾ.?

ಬೆಂಗಳೂರು,ಮೇ 17-ತಮ್ಮ ಸೌಂದರ್ಯ, ಮುದ್ದಾದ ನಗು, ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದ ನಟಿ ದಿವಂಗತ ಸೌಂದರ್ಯ ಅವರ ಜೀವನ ಕಥೆ ತೆರೆ ಮೇಲೆ ಬರಲಿದೆಯಂತೆ.

ತೆಲುಗಿನಲ್ಲಿ ಪೆಳ್ಳಿಚೂಪುಲು, ಮೆಂಟಲ್ ಮಧಿಲೋ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ರಾಜ್, ಸೌಂದರ್ಯ ಅವರ ಕಥೆಯನ್ನು ತೆರೆ ಮೇಲೆ ತರಲು ಉತ್ಸಾಹ ತೋರಿಸಿದ್ದಾರೆ.

ಸದ್ಯ ಈ ಬಗ್ಗೆ ಆಲೋಚನೆ ಮಾಡಿರುವ ನಿರ್ಮಾಪಕ ರಾಜ್, ಸೌಂದರ್ಯ ಅವರ ಮನೆಯವರ ಅನುಮತಿ ಪಡೆದುಕೊಂಡ ನಂತರ ಚಿತ್ರವನ್ನ ನಿರ್ಮಾಣ ಮಾಡುವ ತಯಾರಿ ಮಾಡಿಕೊಳ್ಳಲಿದ್ದಾರೆ. ಹಾಗೆನಾದರೂ ಸೌಂದರ್ಯ ಅವರ ಜೀವನ ಕಥೆ ತೆರೆ ಮೇಲೆ ಬಂದರೆ ನಾಯಕಿ ಯಾರಾಗುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. (ಎಂ.ಎನ್)

Leave a Reply

comments

Related Articles

error: