
ಮೈಸೂರು
ವಿಷ್ಣು ಸ್ಮಾರಕ ಜಾಗ ವೀಕ್ಷಿಸಿದ ಭಾರತಿ ವಿಷ್ಣುವರ್ಧನ್
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮೈಸೂರಿನ ಉದ್ಬೂರು ಬಳಿ ಜಾಗ ಗುರುತಿಸಲಾಗಿದ್ದು, ಡಿ.6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸೋಮವಾರ ಭಾರತಿ ವಿಷ್ಣುವರ್ಧನ್ ಉದ್ಬೂರಿಗೆ ಆಗಮಿಸಿ ಸ್ಥಳ ವೀಕ್ಷಿಸಿದರು.
ಸೋಮವಾರ ಮೈಸೂರಿಗಾಗಮಿಸಿದ ಭಾರತಿ ವಿಷ್ಣುವರ್ಧನ್ ಮಂಗಳವಾರ ಜಿಲ್ಲಾಧಿಕಾರಿ ಡಿ.ರಂದೀಪ್ ಅವರೊಂದಿಗೆ ತೆರಳಿ ಸ್ಥಳ ವೀಕ್ಷಣೆ ನಡೆಸಿದರು.
ಈ ಸಂದರ್ಭ ಎಎಸ್ಪಿ ಕಲಾಕೃಷ್ಣಸ್ವಾಮಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಉಪವಿಭಾಗಧಿಕಾರಿ ಆನಂದ್ ಉಪಸ್ಥಿತರಿದ್ದರು.