ಪ್ರಮುಖ ಸುದ್ದಿ

ಹುಟ್ಟುಹಬ್ಬ ಹಿನ್ನೆಲೆ : ತಿರುಪತಿಯಲ್ಲಿ ಹೆಚ್.ಡಿ.ದೇವೇಗೌಡರು; ಶುಭ ಹಾರೈಸಿದ ಸಿದ್ದರಾಮಯ್ಯ

ದೇಶ(ತಿರುಪತಿ)ಮೇ.18:- ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ 86ನೇ ಜನ್ಮ ದಿನವನ್ನಾಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ತಿರುಪತಿಗೆ ತೆರಳಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಹುಟ್ಟುಹಬ್ಬದ ಕಾರಣಕ್ಕಾಗಿ ಟಿಟಿಡಿ ವತಿಯಿಂದ ವೆಂಕಟೇಶ್ವರನ ಪ್ರಸಾದ ನೀಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸನ್ಮಾನಿಸಲಾಯಿತು. ಪತ್ನಿ ಚೆನ್ನಮ್ಮ, ಪುತ್ರರಾದ ಹೆಚ್.ಡಿ.ರೇವಣ್ಣ, ಬಾಲಕೃಷ್ಣೇಗೌಡ, ರಮೇಶ್ ಗೌಡ, ಪುತ್ರಿಯರಾದ ಶೈಲಜಾ, ಡಾ.ಅನಸೂಯ ಹಾಗೂ ಮೊಮ್ಮಕ್ಕಳು ಕೂಡ ದೇವೇಗೌಡರೊಂದಿಗೆ ತೆರಳಿ ವೆಂಕಟೇಶ್ವರನ ದರ್ಶನವನ್ನು ಪಡೆದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಗೌಡರಿಗೆ ಶುಭ ಹಾರೈಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿ, ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ನಿಮ್ಮದು. ನಿಮ್ಮ ಬದ್ಧತೆ ಎಲ್ಲರಿಗೂ ಸ್ಫೂರ್ತಿದಾಯಕ, ನೂರು ವರ್ಷ ಆಯಸ್ಸು, ಆರೋಗ್ಯ ನಿಮ್ಮದಾಗಲಿ ಎಂದು ಶುಭಹಾರೈಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: