ಪ್ರಮುಖ ಸುದ್ದಿ

ಮಾಯಾವತಿ ಅಖಿಲೇಶ್ ಗೆ 15ದಿನಗಳಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟೀಸ್ ನೀಡಿದ ಯುಪಿ ಸರ್ಕಾರ

ದೇಶ(ಲಕ್ನೋ)ಮೇ.18:- ಸುಪ್ರೀಂಕೋರ್ಟ್ ನ ಆದೇಶದ ಅನುಸಾರ ಉತ್ತರಪ್ರದೇಶದ ಸ್ಟೇಟ್ ಪ್ರಾಪರ್ಟಿ ಡೆವಲಪ್ ಮೆಂಟ್ ಇಲಾಖೆ ಆರು ಮಾಜಿ ಮುಖ್ಯಮಂತ್ರಿಗಳಿಗೆ 15ದಿನಗಳೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ಸೂಚನೆ ನೀಡಿದೆ.

ಇಲಾಖೆಯ ಮುಖ್ಯಾಧಿಕಾರಿ  ಈ ಕುರಿತು ಮಾಹಿತಿ ನೀಡಿದ್ದು, ಬಂಗಲೆ ಖಾಲಿ ಮಾಡುವಂತೆ ನೋಟೀಸ್ ನೀಡಲಾಗುತ್ತಿದೆ. ಶುಕ್ರವಾರ ಮಾಜಿ ಮುಖ್ಯಮಂತ್ರಿಗಳಿಗೆ ತಲುಪಿಸಲಾಗುತ್ತದೆ. ಆರು ಮಾಜಿ ಮುಖ್ಯಮಂತ್ರಿಗಳಾದ ನಾರಾಯಣ್ ದತ್ ತಿವಾರಿ, ಮುಲಾಯಂ ಸಿಂಗ್ ಯಾದವ್, ಕಲ್ಯಾಣ ಸಿಂಗ್, ಮಾಯಾವತಿ, ರಾಜನಾಥ್ ಸಿಂಗ್, ಅಖಿಲೇಶ್ ಯಾದವ್ ಇವರ ಬಳಿ ವಿವಿಐಪಿ ಬಂಗಲೆಗಳಿವೆ. ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲೇ ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ಇರಬಾರದು ಎಂದು ಹೇಳಿತ್ತು. ಯಾವುದೇ ಮುಖ್ಯಮಂತ್ರಿಯ ಅವಧಿ ಮುಗಿದ ನಂತರ ಅವನು ಸಾಮಾನ್ಯ ಮನುಷ್ಯನಂತೆ ಎಂದು ಎನ್ ಜಿಓ ಲೋಕ ಪಹರಿ ಸಲ್ಲಿಸಿದ ಅರ್ಜಿ ವಿಚಾರಣೆಯ ವೇಳೆ ಈ ತೀರ್ಪನ್ನು ತಿಳಿಸಿತ್ತು. ಅದರಂತೆ ಇಂದು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಆರು ಮಂದಿ ಮಾಜಿ ಮುಖ್ಯಮಂತ್ರಿಗಳಿಗೆ ಬಂಗಲೆ ಖಾಲಿ ಮಾಡಲು ಸೂಚನೆ ನೀಡಲಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: