ಮೈಸೂರು

ಸಹೋದರಿಯ ಆರೋಗ್ಯಕ್ಕಾಗಿ ಸಹೋದರನ ಪ್ರಾರ್ಥನೆ

ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನೆಲೆಸಿರುವ ಜಯಲಲಿತಾ ಸೋದರ ಶ್ರೀರಂಗರಾಜಪುರದಲ್ಲಿರುವ ವಾಸುದೇವನ್ ತನ್ನ ಸಹೋದರಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು ಜಯಲಲಿತಾ ಆಪ್ತರಿಗೋಸ್ಕರ ಅಲ್ಲದಿದ್ದರೂ ಜನರಿಗೋಸ್ಕರವಾದರೂ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಜಯಲಲಿತಾ ಅವರು 3 ವರ್ಷದ ಮಗು ಇದ್ದಾಗಲೆ ಮದ್ರಾಸ್ ಸೇರಿಕೊಂಡಿದ್ದರು. ಮೈಸೂರಿನ ಎಲ್ಲ ಆಸ್ತಿಪಾಸ್ತಿ ಮಾರಾಟ ಮಾಡಿ ಮದ್ರಾಸ್ ನಲ್ಲೇ ಜೀವನವನ್ನು ಕಂಡುಕೊಂಡರು. ಹಾಗಾಗಿ ಮೈಸೂರಿನ ಸಂಪರ್ಕ ದೂರಮಾಡಿಕೊಂಡರು.

ನಾನು ಹಲವು ಭಾರಿ ಅವರನ್ನ ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ರಾಜಕಾರಣದಿಂದ ಕುಟುಂಬಸ್ಥರೆಲ್ಲರನ್ನು ದೂರ ಮಾಡಿಕೊಂಡರು. ಅವರು ಮೈಸೂರಿಗೆ ಬಂದಾಗ ಭೇಟಿ ಮಾಡುವ ಪ್ರಯತ್ನ ಮಾಡಿ ವಿಫಲನಾಗಿದ್ದೇನೆ. ಅವರಿಗೆ ನಮ್ಮ ಜೊತೆ ಸಂಪರ್ಕ ಇಟ್ಟುಕೊಳ್ಳಲು ಇಷ್ಟವಿರಲಿಲ್ಲ. ಅವರು ನಮಗೇನು ಮಾಡದಿದ್ದರು ಜನರಿಗೋಸ್ಕರ ಬದುಕಿ ಬರಲಿ ಎಂದಿದ್ದಾರೆ.

 

Leave a Reply

comments

Related Articles

error: