ಕರ್ನಾಟಕಮೈಸೂರು

ಲಲಿತಾದ್ರಿಪುರದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮಶತಮಾನೋತ್ಸವ

ಸುತ್ತೂರು ಡಾ. ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮಶತಮಾನೋತ್ಸವವನ್ನು ಲಲಿತಾದ್ರಿಪುರದ ಜೆ.ಎಸ್.ಎಸ್. ಎರಡನೆ ಹಂತದಲ್ಲಿ ಸೆಪ್ಟೆಂಬರ್ 11ರ ಭಾನುವಾರ ಮದ್ಯಾಹ್ನ 3:30ಕ್ಕೆ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು  ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಉದ್ಘಾಟಿಸುವರು. ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಶ್ರೀಬೇಲಿಮಠದ ಶಿವರುದ್ರಸ್ವಾಮಿಗಳು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಉಪಾಧ್ಯಕ್ಷ ಜಿ. ನಟರಾಜು, ಉದ್ಯಮಿ ಶ್ರೀಕಾಂತದಾಸ್ ಉಪಸ್ಥಿತರಿರುವರು. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ  ಪ್ರೊ. ಮೊರಬದ ಮಲ್ಲಿಕಾರ್ಜುನ ನುಡಿನಮನ ಸಲ್ಲಿಸುವರು. ಜೆ.ಎಸ್.ಎಸ್. ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ಪ್ರೊ. ಕೆ. ವೀರಣ್ಣ, ಉಪಾಧ್ಯಕ್ಷರಾದ ಗಂಗಾಧರ್ ಇವರುಗಳು ಪಾಲ್ಗೊಳ್ಳುವರು.

ಸಮಾರಂಭದ ಅಂಗವಾಗಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಡಾ. ರಾಜೇಂದ್ರ ಶೀಗಳ ಕುರಿತಾದ ದಿವ್ಯಚೇತನ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಗಿಡ ನೆಡುವ ಕಾರ್ಯಕ್ರಮ: ಶತಮಾನೋತ್ಸವ ಅಂಗವಾಗಿ ಜೆ.ಎಸ್.ಎಸ್. ಎರಡನೇ ಹಂತದಲ್ಲಿ ಸೆಪ್ಟೆಂಬರ್ 10ರಂದು ಮಧ್ಯಾಹ್ನ 2 ಗಂಟೆಗೆ ಕುದೇರು ಮಠದ ಗುರುಶಾಂತ ಸ್ವಾಮಿಗಳ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.

Leave a Reply

comments

Related Articles

error: