ಪ್ರಮುಖ ಸುದ್ದಿಮೈಸೂರು

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪನೀರ್ ಸೆಲ್ವಂ ಪ್ರಮಾಣ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಓ. ಪನೀರ್ ಸೆಲ್ವಂ ಅವರು ಪ್ರಮಾಣ ವಚನ ಸ್ಚೀಕರಿಸಿದರು. ಸೋಮವಾರ ಮಧ್ಯರಾತ್ರಿ ರಾಜಪಾಲ್ಯರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಪ್ರಮಾಣ ವಚನ ಬೋಧಿಸಿದರು.

ಇದಕ್ಕೂ ಮೊದಲು ನಿಧನರಾದ ಮುಖ್ಯಮಂತ್ರಿ ಜಯಲಲಿತಾ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಪನೀರ್ ಸೆಲ್ವಂ ಮೂರನೇ ಬಾರಿ ಮುಖ್ಯಮಂತ್ರಿ…

ಈ ಮೊದಲು ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರದ ಆರೋಪ ಸಾಬೀತಾಗಿ ನ್ಯಾಯಾಲಯಗಳಿಂದ ಶಿಕ್ಷೆಗೀಡಾದಾಗ ಮುಖ್ಯಮಂತ್ರಿ ಹುದ್ದೆಯನ್ನು ಎರಡು ಬಾರಿ ತ್ಯಜಿಸಬೇಕಾಗಿ ಬಂದಿತ್ತು. ಎರಡೂ ಬಾರಿಯೂ ಓ ಪನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಿ ಅಮ್ಮನ ಅನುಪಸ್ಥಿತಿ ತುಂಬಿದ್ದರು.

ಇದೀಗ ಜಯಲಲಿತಾ ಅವರು ನಿಧನರಾಗಿರುವುದರಿಂದ ಮೂರನೇ ಬಾರಿಗೆ ಅವರು ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ.

Leave a Reply

comments

Related Articles

error: