ದೇಶಪ್ರಮುಖ ಸುದ್ದಿ

ಪರಿಸ್ಥಿತಿ ಸುಧಾರಣೆಗಾಗಿ 11 ಬ್ಯಾಂಕುಗಳಿಗೆ ಹಣಕಾಸು ನೆರವು: ಪಿಯಶ್ ಗೋಯಲ್

ನವದೆಹಲಿ (ಮೇ 18): ಬ್ಯಾಂಕುಗಳ ಹದಗೆಡುತ್ತಿರುವ ಹಣಕಾಸು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿರುವ ಸರ್ಕಾರಿ ಸ್ವಾಮ್ಯದ ಹನ್ನೊಂದು ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಹಣಕಾಸು ಸಹಕಾರ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯುಶ್ ಗೋಯಲ್ ಅವರು ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿರುವ ಹಣಕಾಸು ಸಮಸ್ಯೆಯಲ್ಲಿರುವ ಬ್ಯಾಂಕುಗಳ ಪಟ್ಟಿಯಲ್ಲಿ ರ್ಪೊರೇಷನ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಯುಕೊ ಬ್ಯಾಂಕ್‌, ದೇನಾ ಬ್ಯಾಂಕ್‌, ಅಲಹಾಬಾದ್‌ ಬ್ಯಾಂಕ್‌, ಯುನೈಟೆಡ್ ಬ್ಯಾಂಕ್‌ ಆಫ್‌ ಇಂಡಿಯಾ, ಕಾಬ್ಯಾಂಕ್‌ ಆಫ್ ಇಂಡಿಯಾ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಒಳಗೊಂಡಿವೆ.

ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಯೋಜನೆಯಲ್ಲಿ 11 ಬ್ಯಾಂಕುಗಳು ತಮ್ಮ ಹಣಕಾಸು ಸಮಸ್ಯೆಗಳಿಂದ ಶೀಘ್ರದಲ್ಲೇ ಹೊರಬಂದು ಪ್ರಬಲವಾಗಲಿವೆ.  ಮುಂದಿನ ಕೆಲವೆ ದಿನಗಳಲ್ಲಿ ಪಿಸಿಎ ಅಡಿ ಹನ್ನೊಂದು ಬ್ಯಾಂಕ್‌ಗಳಿಗೆ ಆರ್ಥಿಕ ಬಿಕ್ಕಟ್ಟಿನಿಂದ ಆದಷ್ಟು ಬೇಗ ಹೊರ ಬರಲು ಎಲ್ಲ ಬಗೆಯ ನೆರವನ್ನು ಶೀಘ್ರದಲ್ಲಿ ನೀಡಲಾಗುವುದು ಎಂದು ಗೋಯಲ್ ಹೇಳಿದರು.

ಅರುಣ್‌ ಜೇಟ್ಲಿ ಅವರು ಅನಾರೋಗ್ಯದಲ್ಲಿರುವುದರಿಂದ ಗೋಯಲ್ ಅವರಿಗೆ ತಾತ್ಕಾಲಿಕವಾಗಿ ಹಣಕಾಸು ಸಚಿವಾಲಯದ ಹೊಣೆ ಹೊರಿಸಲಾಗಿದೆ. ಬ್ಯಾಂಕುಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ವಂಚನೆ ಪ್ರಕರಣ ಹಾಗು ವಸೂಲಾಗದ ಸಾಲದ ಸಮಸ್ಯೆಗಳಲ್ಲಿ ನಷ್ಟ ಅನುಭವಿಸಿರುವ ಬ್ಯಾಂಕುಗಳನ್ನು ಸರಿದಾರಿಗೆ ತರಲಾಗುವುದು ಎಂದು ಗೋಯಲ್ ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: