ಪ್ರಮುಖ ಸುದ್ದಿ

ನಮ್ಮ ಎಲ್ಲ ಶಾಸಕರು ನಮ್ಮ ಜೊತೆಗಿದ್ದಾರೆ : ರಾಮಲಿಂಗಾರೆಡ್ಡಿ

ರಾಜ್ಯ(ಬೆಂಗಳೂರು)ಮೇ.19:- ನಮ್ಮ ಎಲ್ಲಾ ಶಾಸಕರು ನಮ್ಮ ಜೊತೆಯೇ ಇದ್ದಾರೆ. ಇಬ್ಬರು ಎಲ್ಲೋ ಹೋಗಿದ್ದಾರೆ ಈಗ ಬಂದು ನಮ್ಮನ್ನು ಸೇರುತ್ತಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಅಮಿತ್ ಷಾ ಮತ್ತು ಮೋದಿಯವರ ಯಾವ ಕುತಂತ್ರವೂ ಇಲ್ಲಿ ನಡೆಯಲ್ಲ. ಬಿಜೆಪಿ 104 ಶಾಸಕರ ಸಂಖ್ಯೆಯನ್ನು ಮೀರುವುದಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ನಂತರ ನಮ್ಮ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.ಗಣಿಧಣಿಗಳು ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಒಬ್ಬೊಬ್ಬರಿಗೆ 100-150ಕೋ.ರೂ ಆಫರ್ ಮಾಡುತ್ತಿದ್ದಾರೆ. ಇಷ್ಟು ಕೊಡಬೇಕಾದರೆ ಅವರೆಷ್ಟು ದುಡ್ಡು ಮಾಡಿರಬಹುದು ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: