ಮೈಸೂರು

ದಿಟ್ಟತನದಿಂದ ಮುಂದುವರಿದಲ್ಲಿ ಸಾಧನೆ ಸುಲಭ : ಡಾ.ಸರ್ವಮಂಗಳ ಶಂಕರ್

ಮಹಿಳೆಯರು ಅಳುಕು ಬಿಟ್ಟು ದಿಟ್ಟತನದಿಂದ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಸಾಧನೆ ಸುಲಭ ಎಂದು ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾನಿಲಯಗಳ ಕುಲಪತಿ ಡಾ.ಸರ್ವಮಂಗಳ ಶಂಕರ್ ತಿಳಿಸಿದರು.

ಮೈಸೂರಿನ ಕುವೆಂಪು ನಗರದ ಜೆ.ಎಸ್.ಎಸ್ ಕಾನೂನು ಕಾಲೇಜಿನಲ್ಲಿ ನೀಲಗಂಗಾ ಮಹಿಳಾ ಬಳಗದ ವತಿಯಿಂದ ನಡೆದ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ.ಸರ್ವಮಂಗಳಾಶಂಕರ್ ಮತ್ತು ಮರಿಮಲ್ಲಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮಂಗಳ ಮುದ್ದು ಮಾದಪ್ಪ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸರ್ವಮಂಗಳಾ ಶಂಕರ್ ಹೆಣ್ಣು ಸಹನೆಯ ಸ್ವರೂಪ, ಪುರುಷರಿಗೆ ಸಮಾನವಾಗಿ ಇಂದು ಎಲ್ಲ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅಳುಕನ್ನು ಬಿಟ್ಟು ಮುನ್ನಡೆದರೆ ಗೆಲುವಿನ ಹಾದಿ ಸುಗಮವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶಿವರಾಜಪ್ಪ, ಮಾಜಿ ಶಾಸಕ ತೋಂಟದಾರ್ಯ, ಬಳಗದ ಅಧ್ಯಕ್ಷೆ ನೀಲಾಂಬಿಕಾದೇವಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: