ಮೈಸೂರು

ಜ್ಯೂಸ್ ಕುಡಿದು ಹಣದ ಚೀಲ ಮರೆತ ಗ್ರಾಹಕ: ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲು

ಜ್ಯೂಸ್ ಕುಡಿಯಲೆಂದು ಹೋದ ವ್ಯಕ್ತಿಯೂ ತನ್ನ ಹಣದ ಚೀಲವನ್ನೇ ಅಂಗಡಿಯಲ್ಲಿ ಮರೆತು ಬಂದ ಘಟನೆಯೊಂದು ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ಡಿ.ದೇವರಾಜ ಅರಸು ರಸ್ತೆಯ ಜ್ಯೂಸ್ ಅಂಗಡಿಗೆ ತೆರಳಿದ್ದ ರಾಘವೇಂದ್ರ ಮತ್ತು ಆತನ ಸಹೋದರ ಜ್ಯೂಸ್ ಕುಡಿದ ನಂತರ 1.18 ಲಕ್ಷ ರೂ. ಹಣವಿರುವ ಚೀಲವನ್ನು ಸ್ಥಳದಲ್ಲಿಯೇ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಮರೆತು ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ನೋಡಿಕೊಂಡಾಗ ಮಾಡಿದ ಆಚಾತುರ್ಯ ನೆನಪಾಗಿದೆ. ಜ್ಯೂಸ್‍ ಅಂಗಡಿಗೆ ತೆರಳಿ ವಿಚಾರಿಸಿದಾಗ, ನಮಗೇನು ತಿಳಿದಿಲ್ಲವೆಂದು ಅಂಗಡಿ ಮಾಲೀಕರು  ಹೇಳಿದ್ದಾರೆ. ಪ್ರಕರಣವನ್ನು ದೇವರಾಜ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

comments

Related Articles

error: