ಮೈಸೂರು

ಜಿ.ಟಿ.ದೇವೇಗೌಡ ಗೆದ್ದಿದ್ದಕ್ಕೆ ಅಭಿಮಾನಿಯಿಂದ ತಿರುಪತಿಗೆ ಪಾದಯಾತ್ರೆ

ಮೈಸೂರು,ಮೇ.19:- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹರಕೆಯ ಮಹಾಪೂರವೇ ಹರಿದು ಬಂದಿದೆ.

ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಗೆಲ್ಲಲಿ ಎಂದು ಅಭಿಮಾನಿಯೋರ್ವರು ತಿರುಪತಿವರೆಗೂ ಏಕಾಂಗಿಯಾಗಿ ಪಾದಯಾತ್ರೆ ಹರಕೆ ಹೊತ್ತಿದ್ದು, ಹಿನಕಲ್ ಗ್ರಾಮದಿಂದ ತಿರುಪತಿಯವರೆಗೂ ಪಾದಯಾತ್ರೆಗೆ ಹೊರಟಿದ್ದಾರೆ. ಹಿನಕಲ್ ಗ್ರಾಮದ  ಪೈಲ್ವಾನ್ ವೆಂಕಟೇಶ ತಿರುಪತಿ ಯವರೆಗೂ ಪಾದಯಾತ್ರೆ ನಡೆಸಿದ್ದಾರೆ. ಜಿ.ಟಿ.ದೇವೇಗೌಡರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗೆದ್ದರೇ ತಿರುಪತಿಗೆ ಪಾದಯಾತ್ರೆ ಮೂಲಕ ಬರುವುದಾಗಿ ಹರಕೆ ಹೊತ್ತಿದ್ದರು. ಪೈಲ್ವಾನ್ ವೆಂಕಟೇಶ್ ಗೆ ಬೆಂಬಲ ಸೂಚಿಸಲು ಜಿಟಿ ದೇವೆಗೌಡ ಪತ್ನಿ  ಲಲಿತ ಸ್ಥಳಕ್ಕಾಗಮಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರು ತೋರಿಸಿದ ಪ್ರೀತಿ ಅಭಿಮಾನಕ್ಕೆ ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗುವುದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: