ಮೈಸೂರು

ಅಪರಿಚಿತ ವೃದ್ಧೆಯ ಶವ ಪತ್ತೆ

ಮೈಸೂರಿನ ನಂಜನಗೂಡಿನ ಒಕ್ಕಲಗೇರಿ ಬಡಾವಣೆಯ ರಾಮಮಂದಿರದ ಬಳಿ ಅಪರಿಚಿತ ವೃದ್ಧೆಯೋರ್ವರ ಶವ ಪತ್ತೆಯಾಗಿದೆ.

ಸುಮಾರು 60-70 ವಯಸ್ಸಿನ ವೃದ್ಧೆಯಾಗಿದ್ದು, ಅವರ ಬಳಿ  500-1000ರೂ.ಗಳ ಹಳೆಯ ನೋಟುಗಳು ಸುಮಾರು 10ಸಾವಿರದಷ್ಟು ಪತ್ತೆಯಾಗಿವೆ. 10ಸಾವಿರದಷ್ಟು 100ರೂ.ನೋಟು ಹಾಗೂ ಒಂದು ಹೊಸ 2000ರೂ. ಮುಖಬೆಲೆಯ ನೋಟುಗಳು ಸೇರಿ ಒಟ್ಟು 41,410ರೂ.ನಗದು ದೊರಕಿದ್ದು ಅನಾರೋಗ್ಯದಿಂದ ಸತ್ತಿರಬೇಕೆಂದು ಶಂಕಿಸಲಾಗಿದೆ. ಮೃತರ ಶರೀರವನ್ನು ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ವಾರೀಸುದಾರರಿದ್ದಲ್ಲಿ ನಂಜನಗೂಡು ನಗರ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪಿ.ಎಸ್.ಐ ಚೇತನ್ ತಿಳಿಸಿದ್ದಾರೆ. ಠಾಣೆಯ ದೂ.ಸಂ.08221-228383 ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: