
ಕರ್ನಾಟಕಪ್ರಮುಖ ಸುದ್ದಿ
ಕರ್ನಾಟಕದಲ್ಲಿ ಸತ್ಯ ಗೆದ್ದಿದೆ: ಲಾಲು ಪುತ್ರ ತೇಜಸ್ವಿ ಪ್ರತಿಕ್ರಿಯೆ
ಪಟ್ನಾ (ಮೇ 20): ವಿಧಾನಸಭೆಯ ಸದನದಲ್ಲಿ ವಿಶ್ವಾಸ ಮತ ಎದುರಿಸುವುದಕ್ಕೆ ಮುನ್ನವೇ ಕರ್ನಾಟಕ ಮುಖ್ಯಮಂತ್ರಿ ಪದಕ್ಕೆ ಬಿ.ಎಸ್. ಯಡಿಯೂರಪ್ಪ ಶನಿವಾರ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಆರ್.ಜೆ.ಡಿ ನಾಯಕ ತೇಜಸ್ವಿ ಯಾದವ್ ಅವರು “ಸತ್ಯವನ್ನು ಯಾವತ್ತೂ ಸೋಲಿಸಲು ಸಾದ್ಯವಿಲ್ಲ; ಅದು ಯಾವತ್ತೂ ಸುಳ್ಳನ್ನು ಮತ್ತು ಸುಳ್ಳುಗಾರನನ್ನು ಸೋಲಿಸುತ್ತದೆ” ಎಂದು ಹೇಳುವ ಮೂಲಕ ಬಿಜೆಪಿ ನಾಯಕತ್ವಕ್ಕೆ ಟಾಂಗ್ ನೀಡಿದ್ದಾರೆ.
ಆರ್.ಜೆ.ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಅವರು ನಿನ್ನೆಯಷ್ಟೇ ಕರ್ನಾಟಕ ಮಾದರಿಯಲ್ಲಿ ಬಿಹಾರದಲ್ಲಿ ಈಚಿನ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಆರ್.ಜೆ.ಡಿ.ಯ ಸಂಗಡ ಕಾಂಗ್ರೆಸ್, ಸಿಪಿಐ-ಎಂಎಲ್ ಮತ್ತು ಎಚ್ಎಎಂ ನಾಯಕರೊಂದಿಗೆ ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಭೇಟಿಯಾಗಿ ಸರಕಾರ ರಚಿಸುವುದಕ್ಕೆ ತಮ್ಮ ಮೈತ್ರಿ ಕೂಟಕ್ಕೆ ಆಹ್ವಾನ ನೀಡಬೇಕೆಂಬ ಮನವಿಯನ್ನು ಸಲ್ಲಿಸಿದ್ದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 80 ಸ್ಥಾನ ಹೊಂದಿರುವ ಆರ್.ಜೆ.ಡಿ.ಯು ಅತಿ ದೊಡ್ಡ ಏಕೈಕ ಪಕ್ಷವಾಗಿ ಸ್ಥಾನ ಗಳಿಸಿತ್ತು. (ಎನ್.ಬಿ)