ಕರ್ನಾಟಕಮೈಸೂರು

ಸೆ.14ರಂದು ತಜ್ಞರಿಂದ ಮನೋರೋಗ ಕೌನ್ಸಿಲಿಂಗ್ ಹಾಗೂ ಚಿಕಿತ್ಸೆ

ಕುವೆಂಪು ನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದಿಂದ ಮನೋರೋಗಗಳಿಗೆ ಸೂಕ್ತ ಆಯುರ್ವೇದ ಸಲಹೆ, ಮತ್ತು ಕೌನ್ಸೆಲಿಂಗ್ ಇನ್ನಿತರ ಮನೋರೋಗ ಚಿಕಿತ್ಸೆಯನ್ನು ಸೆಪ್ಟೆಂಬರ್ 14ರ ಬುಧವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಚಿಕಿತ್ಸೆ ನೀಡಲಾಗುವುದು.

ತಜ್ಞ ವೈದ್ಯರಾದ ನಿರಂಜನ್ ಹೆಗಡೆ ಹೊಸಬಾಳೆ ಇವರು ತಪಾಸಣೆ ನಡೆಸುವರು. ಇಂದಿನ ಬದಲಾದ ಜೀವನಶೈಲಿ, ಯಾಂತ್ರಿಕ ಜೀವನದ ಭರಾಟೆ, ಪ್ರತಿಯೊಬ್ಬರಲ್ಲೂ ಒತ್ತಡವನ್ನು ಉಂಟು ಮಾಡಿ, ಎಲ್ಲಾ ವಯೋಮಾನದವರಲ್ಲೂ ಹಲವಾರು ದೈಹಿಕ ಮಾನಸಿಕ ತೊಂದರೆಗಳನ್ನು ಉಂಟು ಮಾಡುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಹೊಂದಾಣಿಕೆ ಸಮಸ್ಯೆ, ಹದಿಹರೆಯದ ಸಮಸ್ಯೆ, ಮಹಿಳೆಯರಲ್ಲಿ ಮಾನಸಿಕ ಸಮಸ್ಯೆ, ವೃತ್ತಿಜೀವನದಲ್ಲಿ ಒತ್ತಡ, ಪರೀಕ್ಷೆ – ಇನ್ನಿತರೆ ಭಯ, ವೃದ್ಧಾಪ್ಯದ ಸಮಸ್ಯೆಗಳು ಅಲ್ಲದೆ ಉನ್ಮಾದ ಅಪಸ್ಮಾರಗಳಂತಹ ಮನೋರೋಗಗಳಿಗೂ, ಖಿನ್ನತೆ, ಗೀಳು ರೋಗ, ಅನಿಯಮಿತ ಆತಂಕ, ಗಾಬರಿ, ಭಯ ಅತಿಯಾದ ನಿದ್ರೆ, ಸಿಟ್ಟು ಮುಂತಾದ ಸಮಸ್ಯೆಗಳಿಗೆ  ತಪಾಸಣೆ ನಡೆಸಿ ಚಿಕಿತ್ಸೆ ನೀಡುವರು.

Leave a Reply

comments

Related Articles

error: