ಮೈಸೂರು

ಸ್ವಯಂ ಸೇವಕರಿಗೆ ಅಭಿನಂದನೆ

ಮೈಸೂರಿನ ಕೋಟೆ ಆಂಜನೇಯ ದೇವಳದ ಸಮೀಪವಿರುವ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದಲ್ಲಿ ಎಫ್.ಪಿ.ಎ ಇಂಡಿಯಾ ಉಲ್ಬಾ ಮೈಸೂರು ಶಾಖೆ ವತಿಯಿಂದ ಸ್ವಯಂಸೇವಕರ ದಿನಾಚರಣೆ ಹಾಗೂ ಸ್ವಯಂಸೇವಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಎಫ್.ಪಿ.ಎ.ಇಂಡಿಯಾ ಸದಸ್ಯೆ ಡಾ.ನಯನಕಿರಣ್, ಎಫ್.ಪಿ.ಎ.ಇಂಡಿಯಾ ಹಿಂದಿನ ಕಾರ್ಯಕ್ರಮ ಅಧಿಕಾರಿ ಉಮಾಮಣಿ ಆರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಎಫ್.ಪಿ.ಎ.ಇಂಡಿಯಾ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಉಪಾಧ್ಯಕ್ಷೆ ಡಾ.ಕೆ.ವಿ.ಲಕ್ಷ್ಮಿದೇವಿ, ಕೋಶಾಧ್ಯಕ್ಷ ಹೇರಂಬಾ ಆರ್.ಭಟ್, ಕಾರ್ಯದರ್ಶಿ ಸಹನಾ ಪುರುಷೋತ್ತಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಶ್ರೀ ಜಿ.ರಾವ್, ಸಜ್ಜದ್ ಅಹ್ಮದ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: