ನಮ್ಮೂರುಮೈಸೂರು

ಅಗ್ರಹಾರ ವೃತ್ತಕ್ಕೆ ಟ್ರಾಫಿಕ್ ಸಿಗ್ನಲ್ ಬೇಕು: ಪಾದಚಾರಿ, ವಾಹನ ಸವಾರರ ಆಗ್ರಹ

ಮೈಸೂರಿನ ಹೃದಯಭಾಗ, ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ಸದಾ ವಾಹನ ದಟ್ಟಣೆ ಮತ್ತು ಜನದಟ್ಟಣೆಯಿಂದ ಗಿಜಿಗುಡುವ ಅಗ್ರಹಾರ ವೃತ್ತಕ್ಕೆ ಟ್ರಾಪಿಕ್ ಸಿಗ್ನಲ್‍ ಅವಶ್ಯಕತೆ ಇದೆ ಎನ್ನುವುದು ವಾಹನ ಸವಾರರ ಹಾಗೂ ಫುಟ್‍ಪಾತ್ ಸಂಚಾರಿಗಳ ಅಭಿಪ್ರಾಯ.

ಅಗ್ರಹಾರವು ನಗರದ ಪ್ರಮುಖ ಸ್ಥಳಗಳಲ್ಲೊಂದಾಗಿದ್ದು, ಹಲವಾರು ಪುರಾತನ ದೇವಾಲಯಗಳನ್ನು, ಕಟ್ಟಡಗಳನ್ನು ತನ್ನೊಡಳೊಳಗೆ ಹುದುಗಿಸಿಕೊಂಡಿದ್ದು, ವಿಶ್ವವಿಖ್ಯಾತ ಮೈಸೂರು ನಗರವೂ ಜಾಗತೀಕರಣದಿಂದ ದಿನದಿಂದ ದಿನಕ್ಕೆ ಆಗಾಧವಾಗಿ ಬೆಳೆಯುತ್ತಿದ್ದು ಅಗ್ರಹಾರ ವೃತ್ತದಲ್ಲಿ ಕ್ಷಣಕಾಲ ಬಿಡುವಿಲ್ಲದೇ ಸಂಚರಿಸುವ ವಾಹನಗಳಿಂದ ಒತ್ತಡವುಂಟಾಗುತ್ತಿದೆ. ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸಲು ಯಾವ ಅಭಿವೃದ್ಧಿಯೂ ಇಲ್ಲಿಲ್ಲ.

ಅಗ್ರಹಾರ ‍ಸರ್ಕಲ್ ನಗರದ ಕೇಂದ್ರ ಭಾಗವಾಗಿದ್ದು ಮುಖ್ಯ ರಸ್ತೆಗಳ ಸಂಪರ್ಕ ಸೇತುವೆಯಂತಿದೆ. ಜಿಲ್ಲಾ ನ್ಯಾಯಾಲಯ, ಚಾಮುಂಡಿ ಬೆಟ್ಟ ಹಾಗೂ ಎಂಸಿಸಿಗೆ ತೆರಳುವ ವಾಹನಗಳು ವೃತ್ತವನ್ನು ಹಾದು ಹೋಗಬೇಕಾಗಿದ್ದು ದಿನವೂ ಸಾವಿರಾರು ವಾಹನಗಳು ವೃತ್ತದ ಮೂಲಕ ಸಂಚರಿಸಿದರು ಇಂದಿಗೂ ಇಲ್ಲೊಂದು ಟ್ರಾಫಿಕ್ ಸಿಗ್ನಲ್‍ ಇಲ್ಲದೇ ಇರುವುದು ಆಪಾಯಕ್ಕೆ ಆಹ್ವಾನ ಎನ್ನುವಂತಿದೆ.

page-4-lead-photo-1-1ಟ್ರಾಫಿಕ್ ಸಿಗ್ನಲ್‍ ಇಲ್ಲದೇ ವೃತ್ತದಲ್ಲಿ ನಾಲ್ಕು ಮಾರ್ಗದ ಕಡೆಯಿಂದಲೂ ವಾಹನಗಳು ಯದ್ವಾತದ್ವವಾಗಿ ಸಂಚರಿಸುತ್ತವೆ. ಹಗಲು ಹೊತ್ತಿನಲ್ಲಿಯೇ ಸಂಚಾರ ನಿಯಮವಿಲ್ಲದೆ ವಾಹನಗಳ ಸಂಚಾರದಿಂದ ಟ್ರಾಫಿಕ್ ಸಮಸ್ಯೆಯು ತಲೆದೋರುವುದು. ಟ್ರಾಫಿಕ್ ಪೊಲೀಸಿನವರಿಗೆ ವಾಹನದಟ್ಟಣೆಯನ್ನು ನಿಭಾಯಿಸುವುದು ಸುಲಭಸಾಧ್ಯವಲ್ಲ. ಆದ್ದರಿಂದ, ಕಡ್ಡಾಯವಾಗಿ ಇಲ್ಲಿ ಟ್ರಾಫಿಕ್ ಸಿಗ್ನಲ್ ಅವಶ್ಯವಿದೆ ಎನ್ನುವುದು ಕಾರು ಚಾಲಕ ಮಹೇಶ್ ಅಭಿಪ್ರಾಯ.

ಚಾಮರಾಜ ಜೋಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ವಾಹನಗಳನ್ನು ಕೆಲವೊಂದು ಬಾರಿ ಅಗ್ರಹಾರದ ಮೂಲಕ ತೆರಳಲು ಮಾರ್ಗಸೂಚಿ ಬದಲಾಗುವುದು. ಆಂತಹ ಸಮಯಲ್ಲಿ ಟ್ರಾಫಿಕ್ ಸಮಸ್ಯೆಯೂ ಗಂಭೀರವಾಗುವುದು. ಐದಾರು ಜನ ಪೊಲೀಸರಿಂದಲೂ ವಾಹನಗಳ ಸಂಚಾರ ಸುವ್ಯವಸ್ಥೆಗೆ ಹರಸಾಹಸ ಪಡುವರು. ಆದ್ದರಿಂದ ವೃತ್ತದಲ್ಲಿ ಸಿಗ್ನಲ್ ಅಳವಡಿಸುವುದರಿಂದ ಟ್ರಾಫಿಕ್ ಸಮಸ್ಯೆ ನಿಭಾಯಿಸಬಹುದು ಎನ್ನುವುದು ಸ್ಥಳೀಯ ಉದ್ಯಮಿ ಕುಮಾರ ಅವರ ಅನಿಸಿಕೆ.

ಈ ಬಗ್ಗೆ ಸಿಟಿಟುಡೆಗೆ ಪ್ರತಿಕ್ರಿಯಿಸಿರುವ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಅಗ್ರಹಾರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಹಾಕುವುದರಿಂದ ಸಮಸ್ಯೆಯೂ ನಿವಾರಣೆಯಾಗುವ ಬದಲು ಮತ್ತಷ್ಟು ಉಲ್ಭಣಿಸುವುದು. 100 ಮೀಟರ್ ಅಂತರದೊಳಗೆ ತ್ಯಾಗರಾಜ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯೂ ಸಿಗ್ನಲ್ ಅಳವಡಿಸಿದರೆ ಟ್ರಾಫಿಕ್ ಜಾಮ್ ಅಗುವುದು. ಎಲ್ಲ ರಸ್ತೆಗಳು ನೇರ ಹಾಗೂ ಏಕಮುಖವಾಗಿದ್ದು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಿಲ್ಲ. ಇಲ್ಲೊಬ್ಬ ಪೊಲೀಸರನ್ನು ಕಡ್ಡಾಯವಾಗಿರುವಂತೆ ನೋಡಿಕೊಳ್ಳಲಾಗುವುದು ಎಂದರು.

ಅಗ್ರಹಾರ ಸರ್ಕಲ್ ನಗರದ ಅತ್ಯಂತ ವಾಹನದಟ್ಟಣೆಯಿಂದ ಕೂಡಿರುವ ಸ್ಥಳವಾಗಿದ್ದು ಟ್ರಾಫಿಕ್ ಸಿಗ್ನಲ್ ಅಳವಡಿಸುವುದರಿಂದ ರಸ್ತೆ ಅಪಘಾತಗಳನ್ನು ಹಾಗೂ ವಾಹನದಟ್ಟಣೆಯನ್ನು ತಡೆಯಲು ಸಾಧ್ಯ.

 

Leave a Reply

comments

Related Articles

error: