ಮೈಸೂರು

ಕುಕ್ಕರಹಳ್ಳಿ ಕೆರೆ ವೀಕ್ಷಣೆ ಕಾರ್ಯಕ್ರಮ

ಮೈಸೂರು,ಮೇ.21:- ವೈಲ್ಡ್ ಮೈಸೂರು ವತಿಯಿಂದ ಆಯೋಜಿಸಲಾಗಿದ್ದ  ಕುಕ್ಕರಹಳ್ಳಿ ಕೆರೆ ವೀಕ್ಷಣೆ ಕಾರ್ಯಕ್ರಮ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ನಡೆಯಿತು.

ನಿನ್ನೆ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಪ್ರೊ.ಯು.ಎನ್.ರವಿಕುಮಾರ್ ಅವರು ಆಗಮಿಸಿದ್ದರು,ಬಳಿಕ  ಅವರು ಕೆರೆಯ ಇತಿಹಾಸ, ಅದರ ಭೌಗೋಳಿಕ ರಚನೆ, ಕೆರೆಯಲ್ಲಿನ ಜೀವವೈವಿಧ್ಯ, ಕೆರೆಯ ಉದ್ದೇಶ ಹಾಗೂ ಅದರ ಸಂರಕ್ಷಣೆಯ ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಿದರು. ನಮ್ಮ ಕೆರೆಯನ್ನು ಬೇರೆ ಕೆರೆಗಳಿಗೆ ಹೋಲಿಸುವುದು, ಅದರಂತೆ ಪರಿವರ್ತಿಸಲು ಪ್ರಯತ್ನಿಸುವುದನ್ನು ನಿಲ್ಲಿಸಿ, ಕೆರೆಯನ್ನು ಸ್ವಾಭಾವಿಕವಾಗಿಯೇ ಇರಲು ಬಿಡುವುದು ಒಳ್ಳೆಯದು. ಕೆರೆಯ ನೀರನ್ನು ಶುದ್ಧೀಕರಿಸುವುದಕ್ಕೆ, ನೀರನ್ನು ಶುದ್ಧೀಕರಿಸಬಲ್ಲ ಸಸ್ಯಗಳನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು. ಸಂಪತ್ ಕುಮಾರ್ ರವರು, ಕುಕ್ಕರಹಳ್ಳಿ ಕೆರೆಯಲ್ಲಿನ ಸಸ್ಯ ವೈವಿಧ್ಯತೆಯ ಕುರಿತು ಮಾಹಿತಿ ನೀಡಿದರು. ಸುಮಾರು 40 ಮಂದಿ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: