ಕ್ರೀಡೆಮೈಸೂರು

ಹಾಕಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಟೆರೀಷಿಯನ್ ಕಾಲೇಜು

ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ  ವತಿಯಿಂದ ತುಮಕೂರು ಎಸ್.ಐ.ಟಿ ಕಾಲೇಜು ಕ್ರೀಡಾಂಗಣದಲ್ಲಿ  ಬಾಲಕ ಬಾಲಕಿಯರ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಸ್ಪರ್ಧೆಯನ್ನುಆಯೋಜಿಸಲಾಗಿತ್ತು. ಅದರಲ್ಲಿ ವಿಜೇತರಾದ ಮೈಸೂರಿನ ಟೆರೀಷಿಯನ್ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಡಿಸೆಂಬರ್ 7 ರಿಂದ 20 ರವರೆಗೆ ಪಂಜಾಬ್ ನಲ್ಲಿ ಜರುಗಲಿರುವ ರಾಷ್ಟ್ರ ಮಟ್ಟದ ಹಾಕಿ ಸ್ಪರ್ಧೆಯಲ್ಲಿ  ಟೆರೀಷಿಯನ್  ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಮೇಘನಾ ಸಿ.ವಿ, ಧೃತಿ ಎಂ.ಸಿ, ಅಂಜಲಿ ಎಚ್.ಆರ್, ಶ್ರಾವ್ಯ ಜಿ.ಬಿ, ಸೌಜನ್ಯ ಎಸ್.ಪಿ, ಕಾದಂಬರಿ ಎಸ್.ಎಂ, ದೇವಿ ಎಂ, ಆಶಿಕಾ ಎಂ.ಜಿ, ಪೂಜಿತಾ ಬಿ.ಎನ್, ಉಷಾ ಎಂ.ಎಂ,  ಪಾಲ್ಗೊಳ್ಳಲಿದ್ದಾರೆ. ತಂಡವನ್ನು ಕಾಲೇಜು ಪ್ರಾಧ್ಯಾಪಕ ವೃಂದ ಅಭಿನಂದಿಸಿದೆ.

Leave a Reply

comments

Related Articles

error: