ಕರ್ನಾಟಕಮೈಸೂರು

ರಾಜಕೀಯ ದೊಂಬರಾಟ ನೋಡುವುದು ಅನಿರ್ವಾಯ : ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯ

ಪ್ರಮಾಣ ವಚನಕ್ಕೆ ಮೊದಲೇ ಜೆಡಿಎಸ್-ಕಾಂಗ್ರೆಸ್ ನಲ್ಲಿ ಗೊಂದಲ

ಮೈಸೂರು,ಮೇ. 21 : ಪ್ರಮಾಣ ವಚನಕ್ಕೆ ಮೊದಲೇ ಜೆಡಿಎಸ್-ಕಾಂಗ್ರೆಸ್ ನಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಕೆಲವು ದಿನಗಳ ಕಾಲ ಇವರಿಬ್ಬರ ರಾಜಕೀಯ ದೊಂಬರಾಟ ನೋಡುವುದು ರಾಜ್ಯದ ಜನತೆಯ ಅನಿರ್ವಾಯ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಇರುವುದು ನಕಲಿ ಕಾಂಗ್ರೆಸ್, ಪಕ್ಷದ ಜೋಕರ್ ಉಗ್ರಪ್ಪ ಬಿಡುಗಡೆ ಮಾಡಿದ್ದು ನಕಲಿ ಸಿಡಿ, ಅ ಲ್ಲಿ ನಡೆದಿರುವ ಮಾತುಕತೆ ನಕಲಿ ಸೃಷ್ಠಿ, ಸತಃ ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾಳ್ ತಳಿಹಾಕಿದ್ದು ಇದರಿಂದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಅವರಪ್ಪನಾಣೆ ಮುಖ್ಯಮಂತ್ರಿಯಾಗಲ್ಲ, ಮುಖ್ಯಮಂತ್ರಿ ಮಾಡದೆ ಹೋದರೆ ಸತ್ತೇ ಹೋಗುವೆ ಎನ್ನುವ ನಾಯಕರು ಸೇರಿ ಇಂದು ಜೊತೆಯಾಗಿದ್ದರೆ, ಇವರನ್ನು ರಾಜ್ಯದ ಜನರು ಬಲ್ಲರು. ಅಧಿಕಾರದ ಹಪಾಹಪಿಯಿಂದ ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ನೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ ಹೆಚ್ಚು ಕಾಲ ನಿಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಚುನಾವಣೆಯಲ್ಲಿ ಅಧಿಕಾರದ ದುರುಪಯೋಗ ಪಡಿಸಿಕೊಂಡಿದ್ದು, ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸ್ಪರ್ಧಿಸಿದ್ದ ಗದಗಿನ ಭದ್ರತಾ ಕೊಠಡಿಗಳಲ್ಲಿದ್ದ ಮತಯಂತ್ರ ಹಾಗೂ ವಿವಿ ಪ್ಯಾಡ್ ಬದಲಾಗಿದೆ ಎಂದು ಪಕ್ಷದ ಪರಾಜಿತ ಅಭ್ಯರ್ಥಿ ಈಗಾಗಲೇ ಎಫ್ಐಆರ್ ದಾಖಲಿಸಿದ್ದು, ದೂರಿನ್ವಯ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ತನಿಖೆ ನಡೆಸಲು ಮನವಿ ಮಾಡಲಾಗುವುದು ಎಂದರು.

ಜಾತಿ, ಧರ್ಮಗಳನ್ನು ಒಡೆದ ಸಿಎಂ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಮತದಾರರು ಹೀನಾಯವಾಗಿ ಸೋಲಿಸಿದ್ದು, ಕೇವಲ 38 ಶಾಸಕರಿದ್ದ ಜೆಡಿಎಸ್ ಗೆ ಕೆಂಪು ಹಾಸು ಹಾಸಿದ್ದು ಕಾಂಗ್ರೆಸ್ ನ ಅಧಿಕಾರಿದ ದುರಾಸೆಗೆ ಸಾಕ್ಷಿ, ರಾಜ್ಯದ ಮತದಾರರು ಕಾಂಗ್ರೆಸ್ –ಜೆಡಿಎಸ್ ಅನ್ನು ತಿರಸ್ಕರಿಸಿದ್ದಾರೆ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಪ್ರೀತಂ ಗೌಡ ಜೆಡಿಎಸ್ ಹೋಗುತ್ತಾರೆ ಎಂಬುದು ಕೇವಲ ವದಂತಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ಹತ್ತು ವರ್ಷ ಬಿ.ಎಸ್.ವೈ ನೇತೃತ್ವದಲ್ಲಿಯೇ ಬಿಜೆಪಿ : ರಾಜ್ಯದಲ್ಲಿ ಬಿಜೆಪಿಯು ಜನಮೆಚ್ಚುಗೆ ಪಡೆದಿದೆ ಹೆಚ್ಚು ಸ್ಥಾನಗಳನ್ನು ಗಳಿಸಿದ ಏಕೈಕ ಪಕ್ಷವಾಗಿ ಹೊರ ಹೊಮ್ಮಿದ್ದು. ಮುಂದಿನ ಸಂಸತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವುದು, ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಬಿ.ಎಸ್.ವೈ ಅವರು ರಾಜ್ಯಾಧ್ಯಂತ ಪ್ರವಾಸ ಮಾಡಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲಿದ್ದು ಮುಂದಿನ ಹತ್ತು ವರ್ಷಗಳ ಕಾಲ ಅವರೇ ನಾಯಕರು ಎಂದರು.

ಶಿಕ್ಷಕರ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ಗಣೇಶ್ ಕಾರ್ಣಿಕ್, ನಿರಂಜನ ಮೂರ್ತಿ, ಆಯನೂರು ಮಂಜುನಾಥ್ ಇವರುಗಳು ಸ್ಪರ್ಧಿಸುವರು ಎಂದು ತಿಳಿಸಿದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಪ್ರಭಾಕರ ಸಿಂಧೆ, ಮಹೇಶ್, ಮತ್ತಿತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: