ಕರ್ನಾಟಕ

ಶಾಂತಿ ಕದಡಲು ಯತ್ನ: ಇಬ್ಬರ ಬಂಧನ

ಮಂಗಳೂರು,ಮೇ 21-ಸಾಮಾಜಿಕ ಜಾಲ ತಾಣದ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೆರಾಳೆ ನಿವಾಸಿ ನಿತಿನ್ (29), ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ದಿನೇಶ್ (31) ಬಂಧಿತ ಆರೋಪಿಗಳು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಹುಮತ ದೊರೆಯದೇ ಉರುಳಿ ಜೆಡಿಎಸ್ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದವು. ನಡುವೆ ಸಮಾಜದಲ್ಲಿ ಶಾಂತಿ ಕದಡುವಂಥ ಕೆಲವು ಸುಳ್ಳು ಸುದ್ದಿಗಳೂ ಹರಿದಾಡಲು ಆರಂಭಿಸಿದ್ದವು.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚರ ವಹಿಸಿದ್ದ ಹಿನ್ನೆಲೆಯಲ್ಲಿ ಶಾಂತಿ ಕದಡಲು ಯತ್ನಿಸಿದ್ದ ಇವರನ್ನು ಬಂಧಿಸಲಾಗಿದೆ.

ಬಿಜೆಪಿ ಸರ್ಕಾರ ಬಿದ್ದು ಹೋದ ವೇಳೆ ಸಂಭ್ರಮಾಚರಣೆ ನೆಪದಲ್ಲಿ ಘರ್ಷಣೆ ನಡೆದಿತ್ತು. ಸಂದರ್ಭದಲ್ಲಿ ಅರೋಪಿಗಳಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಪರಿಸ್ಥಿತಿ ಬಿಗಡಾಯಿಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: