ದೇಶ

ಅಮ್ಮನ ನಿಧನಕ್ಕೆ ಒಂದು ದಿನ ಶೋಕಾಚರಣೆ ಘೋಷಿಸಿದ ಕೇಂದ್ರ

ಪ್ರಾದೇಶಿಕ ಪಕ್ಷವೊಂದರಲ್ಲಿಯೇ ದೇಶಾದ್ಯಂತ ಛಾಪು ಮೂಡಿಸಿದ ತಮಿಳುನಾಡು ಸಿಎಂ ಜೆ.ಜಯಲಲಿತಾ ಸಾವಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಒಂದು ದಿನದ ಶೋಕಾಚರಿಸಲಿದೆ. ದೇಶದಲ್ಲೆಡೆ ರಾಷ್ಟ್ರಧ್ವಜವನ್ನು ಇಂದು ಅರ್ಧಕ್ಕೆ ಹಾರಿಸಾಗುತ್ತದೆ.

ತಮಿಳುನಾಡಿನ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಏಳು ದಿನಗಳ ಶೋಕಾಚರಣೆ ನಡೆಸುವಂತೆ ಆದೇಶಿಸಲಾಗಿದೆ. ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಚೆನ್ನೈ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದ್ದರೆ, ಮತ್ತೊಂದೆಡೆ ರಸ್ತೆಗಳು ವಾಹನ ಸಂಚಾರವಿಲ್ಲದೆ, ಬಿಕೋ ಎನ್ನುತ್ತಿವೆ.

ಚೆನ್ನೈನ ರಾಜಾಜಿಹಾಲ್‍ನಲ್ಲಿ ಜಯಾ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಹಸ್ರಾರು ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಸಂಜೆ 4.30ರ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.

ಪ್ರಧಾನಿ ಮೋದಿ ಸಂತಾಪ: ಜಯಲಲಿತಾ ಅವರ ಅಕಾಲಿಕ ಮರಣ ತೀವ್ರ ನೋವನ್ನು ತಂದಿದೆ. ಅವರ ಅಕಾಲಿಕ ಮರಣ ತೀವ್ರ ನೋವನ್ನು ತಂದಿದೆ. ಅವರ ಅಗಲಿಕೆ ಭಾರತೀಯ ರಾಜಕೀಯಕ್ಕೆ ತಂಬಲಾರದ ನಷ್ಟ. ಜನರೊಂದಿಗೆ ಜಯಲಲಿತಾ ಅವರ ಸಂಪರ್ಕ ಅವಿನಾವಭಾವವಾಗಿತ್ತು. ಬಡ ಜನರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಮಹಿಳೆಯರಿಗೆ ಜಯಲಲಿತಾ ಅವರು ಎಂದಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Leave a Reply

comments

Related Articles

error: