ಕರ್ನಾಟಕ

ರೆಸಾರ್ಟ್‌ನಿಂದ ಹೊರ ಬಂದ ಜೆಡಿಎಸ್ ಶಾಸಕ!

ದೇವನಹಳ್ಳಿ (ಮೇ 21): ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ ದೇವನಹಳ್ಳಿ ಪ್ರೆಸ್ಟೀಜ್ ಗಾಲ್ಫ್‌ ಶೈರ್‌ ರೆಸಾರ್ಟ್‌ನಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಆಪರೇಷನ್ ಕಮಲ ಕಾರಣವಲ್ಲ, ಬದಲಾಗಿ ತುಮಕೂರಿನ ಶಿರಾ ಬಳಿ ಅಪಘಾತವಾಗಿ ಏಳು ಜನ ಮೃತಪಟ್ಟಿರುವ ಹಿನ್ನೆಲೆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಅವರು ರೆಸಾರ್ಟ್’ನಿಂದ ಹೊರಬಂದಿದ್ದಾರೆ.

ಬೆಳಗ್ಗೆ ಶಿರಾ ಬಳಿ ಅಪಘಾತವಾಗಿ 7 ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರೆಸಾರ್ಟ್ ಬಳಿ ಶಾಸಕ ಸತ್ಯನಾರಾಯಣ ಅವರ ಆಪ್ತರು ಅವರನ್ನು ಕರೆದೊಯ್ಯಲು ಬಂದಿದ್ರು. ಆಪ್ತರ ಜತೆ ಕ್ಷೇತ್ರಕ್ಕೆ ತೆರಳುವ ಮುನ್ನಾ ಮಾತನಾಡಿದ ಸತ್ಯನಾರಾಯಣ ಅವರು, ನಾವು ಎಲ್ಲರೂ ಬಹುಮತ ಸಾಬಿತುಪಡಿಸುವವರೆಗೂ ಜತೆಯಲ್ಲಿರುತ್ತೇವೆ. ಇದೀಗ ಕ್ಷೇತ್ರಕ್ಕೆ ತೆರಳಿ ಸಂಜೆ ಮತ್ತೆ ರೆಸಾರ್ಟ್‌ಗೆ ವಾಪಸ್ಸಾಗುತ್ತೇನೆ. ಸಂಜೆ ಕುಮಾರಸ್ವಾಮಿಯವರು ಆಗಮಿಸಿಲಿದ್ದು ಎಲ್ಲ ಶಾಸಕರ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದರು. (ಎನ್.ಬಿ)

Leave a Reply

comments

Related Articles

error: