ಮೈಸೂರು

ವೈದ್ಯರು ನೀಡಿದ ಔಷಧ ಸೇವಿಸಿ : ಡಾ.ಬಿ.ಕೃಷ್ಣಮೂರ್ತಿ ಕಿವಿಮಾತು

kote-anjaneyaಭಾರತೀಯ ಔಷಧೀಯ ಒಕ್ಕೂಟದ ಮೈಸೂರು ಶಾಖೆ ವತಿಯಿಂದ ರಾಷ್ಟ್ರೀಯ ಔಷಧ ಸಪ್ತಾಹ  ಪ್ರಯುಕ್ತ  ಮಂಗಳವಾರ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಾಗೃತಿಗಾಗಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಕೋಟೆ ಆಂಜನೇಯ ದೇವಸ್ಥಾನದ ಬಳಿ ಮೈಸೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಔಷಧವನ್ನು ಹಲವು ರೋಗಗಳ ನಿವಾರಣೆಗಾಗಿ ಸೇವಿಸುತ್ತೇವೆ. ಔಷಧ ಜೀವವನ್ನು ಉಳಿಸುತ್ತದೆ. ಆದರೆ ವೈದ್ಯರು ನೀಡಿದ ಔಷಧವನ್ನು ಮಾತ್ರ ಸೇವಿಸಬೇಕು. ನಿಮ್ಮಿಷ್ಟದಂತೆ ಔಷಧ ಸೇವಿಸಿ ಅಪಾಯ ತಂದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭ ಸಿ.ಎಂ.ಶಿವಕುಮಾರ್, ಎಸ್.ನಾಗರಾಜ್, ವಿನೋದ್ ಮತ್ತಿತರರು ಉಪಸ್ಥಿತರಿದ್ದರು.

ಔಷಧಿಯ ಮಹತ್ವವನ್ನು ಬರೆದ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಜಾಥಾ ನಡೆಸಿ ಜನರಲ್ಲಿ  ಅರಿವು ಮೂಡಿಸಿದರು.  ಸುಮಾರು 200ಕ್ಕೂ ಹೆಚ್ಚಿನ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

comments

Related Articles

error: