
ಮೈಸೂರು
ವಕೀಲರುಗಳು ಉತ್ತಮವಾಗಿ ವಾದ ಮಂಡಿಸಿದಾಗ ಉತ್ತಮ ತೀರ್ಪನ್ನು ನೀಡಲು ಸಾಧ್ಯವಾಗುತ್ತದೆ : ಸಂದೀಪ್ ಅ ನಾಯಕ
ಮೈಸೂರು,ಮೇ.21:- ನ್ಯಾಯಾಲಯಗಳಲ್ಲಿ ವಕೀಲರುಗಳು ಉತ್ತಮವಾಗಿ ವಾದ ಮಂಡಿಸಿದಾಗ ಉತ್ತಮ ತೀರ್ಪನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಅ ನಾಯಕ ಅಭಿಪ್ರಾಯಪಟ್ಟರು.
ಅವರು ನಂಜನಗೂಡು ವಕೀಲರ ಸಂಘದ ಆಶ್ರಯದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿಂದು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಳೆದ 3ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು ಇಲ್ಲಿನ ಹಿರಿಯ ವಕೀಲರುಗಳಿಂದ ಹಲವಾರು ವಿಷಯಗಳನ್ನು ಕಲಿತಿದ್ದೇನೆ. ಇಲ್ಲಿನ ಸಿಬ್ಬಂದಿ ವರ್ಗದವರು ನನಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾವುಕರಾದರು.
ಸಮಾರಂಭದಲ್ಲಿ ಹಿರಿಯ ವಕೀಲರುಗಳಾದ ಕೆ.ಬಿ.ಜಯದೇವಪ್ಪ, ಎನ್.ಶ್ರೀಕಂಠಪ್ರಸಾದ್, ಜೆ.ಸೇತುರಾವ್, ಎನ್.ಸುರೇಶ್, ನಂಜುಂಡಸ್ವಾಮಿ(ಬೊಮ್ಮಾಯ) ಇ.ಮಹದೇವಕುಮಾರ್, ಎ.ಸಿ.ಪ್ರಕಾಶ್, ಹೆಜ್ಜಿಗೆ ನಾಗೇಂದ್ರಪ್ಪ, ತಾರಕಾರಾಂ, ವಸಂತಲಕ್ಷ್ಮಿ, ಗೊಳೂರು ಉಮೇಶ್, ಅಪರ ನ್ಯಾ. ಶಿವಕುಮಾರ್, ಗಿರಿರಾಜ್, ಮೃತ್ಯಂಜಯ, ಕರಿಯಪ್ಪ, ಚಿನ್ನಸ್ವಾಮಿ, ಕುಮಾರ್, ವೆಂಕಟೇಶ್, ವರಳುವಾಡಿ ಮಹೇಶ್, ಕೆಂಪಲಿಂಗಸ್ವಾಮಿ, ಸೇರಿ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.(ಕೆ.ಎಸ್,ಎಸ್.ಎಚ್)