ಕ್ರೀಡೆ

ಬಂಟರ ಕ್ರೀಡಾಕೂಟ ಸಮಾರೋಪ : ನೀಲುಮಾಡು ಎ ತಂಡಕ್ಕೆ ಕ್ರಿಕೆಟ್ ಪ್ರಶಸ್ತಿ

ರಾಜ್ಯ(ಮಡಿಕೇರಿ) ಮೇ 21 : – ಕೊಡಗು ಜಿಲ್ಲಾ ಬಂಟರ ಸಂಘ ಹಾಗೂ ವೀರಾಜಪೇಟೆಯ ನೀಲುಮಾಡು ಬಂಟರ ಸಂಘದ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣಲ್ಲಿ ನಡೆದ ಜಿಲ್ಲಾ ಮಟ್ಟದ 5ನೇ ವರ್ಷದ ಬಂಟರ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ.

ಕ್ರಿಕೆಟ್ ಪಂದ್ಯಾವಳಿಯಲ್ಲಿ ನೀಲುಮಾಡು ಎ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮೂರ್ನಾಡು ವಾರಿಯರ್ಸ್ ಎ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಿದ್ದವು.

ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ನೀಲುಮಾಡು ತಂಡ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು, ಮೊದಲು ಬ್ಯಾಟ್ ಮಾಡಿದ ಮೂರ್ನಾಡು ವಾರಿಯರ್ಸ್ ತಂಡ ನಿಗದಿತ ಆರು ಓವರ್‍ಗಳಲ್ಲಿ 71ರನ್ ಗಳಿಸಿತು. ತಂಡದ ಪರ ಸಂದೇಶ್ ಹ್ಯಾಟ್ರಿಕ್ ಸಿಕ್ಸರ್‍ನೊಂದಿಗೆ 38 ರನ್ ಸಿಡಿಸಿದರೆ, ರವೀಂದ್ರ 11 ರನ್‍ಗಳಿಸಿದರು.

ಸವಾಲು ಬೆನ್ನಟ್ಟಿದ ನೀಲುಮಾಡು ತಂಡ ಆರಂಭದಲ್ಲೇ  ದೀಪಕ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತಾದರೂ,  ನಂತರ ಚೇತರಿಕೆಯ ಆಟವಾಡಿದ ಸುದರ್ಶನ್ ಅರ್ಧ ಶತಕ ಸಿಡಿಸಿ ತಂಡ ಗೆಲುವಿನ ರೂವಾರಿಯಾದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‍ನಲ್ಲಿ ಮೂರ್ನಾಡು ವಾರಿಯರ್ಸ್ ಹಾಗೂ ಸಾಮ್ರಾಟ್ ರೈ ಬ್ರದರ್ಸ್ ನಡುವಿನ ಸೆಣಸಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಸಾಮ್ರಾಟ್ ರೂ ಬ್ರದರ್ಸ್ ತಂಡ ನಿಗದಿತ ನಾಲ್ಕು ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು  49ರನ್ ಗಳಿಸಿದರೆ, ವಾರಿಯರ್ಸ್ ತಂಡ ಮೂರು ಓವರ್‍ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನೀಲುಮಾಡು ಎ ತಂಡ ಕೈಕೇರಿಯ ಯಂಗ್ ಪ್ಯಾಂಥರ್ಸ್ ತಂಡವನ್ನು ಎದುರಿಸಿತು. ಟಾಸ್‍ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೈಕೇರಿ ತಂಡ 45 ರನ್ ಗಳಿಸಿದರೆ, ನೀಲುಮಾಡು ತಂಡ ರೋಚಕ ಗೆಲುವು ಪಡೆಯಿತು.

ವಾರ್ಷಿಕ ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, 100 ಮೀಟರ್ ಓಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ,  ಬಾಂಬ್ ಇನ್‍ದಿ ಸಿಟಿ, ಭಾರದ ಗುಂಡು ಎಸೆತ, ಮಕ್ಕಳಿಗೆ ಕಪ್ಪೆ ಜಿಗಿತ,  ಸೇರಿದಂತೆ  ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳು ನಡೆದವು.

ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ, ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ರಮೇಶ್ ರೈ, ಉದ್ಯಮಿ ಜಯಂತಿ ಆರ್ ಶೆಟ್ಟಿ, ಕೃಷ್ಣ ಶೆಟ್ಟಿ, ರತ್ನಾಕರ ಶೆಟ್ಟಿ, ಬಾಲಕೃಷ್ಣ ರೈ ಶಶಿಕಲಾ ಲೋಕೇಶ್ ರೈ ಮತ್ತಿತರರು ಪಾಲ್ಗೊಂಡಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: